ಗುಣಮಟ್ಟದ ಸಂಶೋಧನೆಗೆ ಪ್ರೋತ್ಸಾಹ ಅಗತ್ಯ

ನಗರದ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಮೃತ್ಯುಂಜಯ ಉದ್ಘಾಟಿಸಿದರು. ಡಾ.ಹನುಮಂತಾಚಾರ್ ಜೋಶಿ, ಕಾರ್ತಿಕ್, ಡಾ.ಉಮೇಶ್ ಇದ್ದರು.
ನಗರದ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಮೃತ್ಯುಂಜಯ ಉದ್ಘಾಟಿಸಿದರು. ಡಾ.ಹನುಮಂತಾಚಾರ್ ಜೋಶಿ, ಕಾರ್ತಿಕ್, ಡಾ.ಉಮೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಮೃತ್ಯುಂಜಯ ಅಭಿಪ್ರಾಯ
  • ಕೋರ್ ಕ್ಲಿನಿಕಲ್, ಸಂಶೋಧನಾ ಸಾಮರ್ಥ್ಯ ಕುರಿತ ಸಮಾರಂಭ
ಸಂಶೋಧನೆಯ ಗುಣಮಟ್ಟ ಹಾಗೂ ಉತ್ಕೃಷ್ಟತೆ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಕಾಲೇಜಿನ ಹಂತದಲ್ಲಿಯೇ ಸಂಶೋಧನೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದು ಫಾರೂಖ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಷನ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ನ ಆರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಮೃತ್ಯುಂಜಯ ಹೇಳಿದರು.
ನಗರದ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕೋರ್ ಕ್ಲಿನಿಕಲ್ ಮತ್ತು ಸಂಶೋಧನಾ ಸಾಮರ್ಥ್ಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜು ಹಂತದಲ್ಲಿ ಪೋತ್ಸಾಹ ನೀಡಿದರೆ ಅವರು ಪಿಎಚ್.ಡಿ ಹಂತಕ್ಕೆ ಬಂದಾಗ, ಸಂಶೋಧನೆಯಲ್ಲಿ ಗುಣಮಟ್ಟ ಹೆಚ್ಚಾಗಲಿದೆ ಎಂದರು.
ಭಾರತದಲ್ಲಿ ಔಷಧಗಳ ಸಂಶೋಧನೆ ತ್ವರಿತಗತಿಯಿಂದ ಸಾಗುತ್ತಿದೆ. ಆದರೆ, ಹಲವಾರು ರೋಗಗಳಿಗೆ ಔಷಧಗಳನ್ನು ಕಂಡುಹಿಡಿಯುವುದು ಇನ್ನೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಸಂಶೋಧನೆಗೆ ಅನುಕೂಲವಾಗುವಂತ ತರಬೇತಿಯು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಪ್ರಮುಖವಾಗಿ ಔಷಧ ವಿಜ್ಞಾನ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿಗಳನ್ನು ನೀಡಬೇಕು ಮತ್ತು ಅವರು ಸಂಶೋಧನಾತ್ಮಕ ಕಾರ್ಯಗಳನ್ನು ಕಾಲೇಜು ಸ್ಥಳದಲ್ಲಿಯೇ ಕೈಗೊಳ್ಳುವಂತೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಮಾತನಾಡಿದರು, ತರಬೇತುದಾರ ಕಾರ್ತಿಕ್, ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಮುಖ್ಯಸ್ಥ ಡಾ.ಉಮೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net