ಮೀಸಲಾತಿ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಿ

ಮೈಸೂರು ನಗರದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ನಾಯಕ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಭೇಟಿ ಮಾಡಿ ಮೀಸಲಾತಿ ಹೆಚ್ಚಳ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಿದರು. ಎಂ.ರಾಮಚಂದ್ರ, ಶ್ರೀನಿವಾಸ ನಾಯಕ, ಡಾ.ಬಂಡಳ್ಳಿ ಕುಮಾರ್, ಡಾ.ಕಳಲೆ ಮಹೇಶ್ ಇದ್ದರು.
ಮೈಸೂರು ನಗರದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ನಾಯಕ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಭೇಟಿ ಮಾಡಿ ಮೀಸಲಾತಿ ಹೆಚ್ಚಳ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಿದರು. ಎಂ.ರಾಮಚಂದ್ರ, ಶ್ರೀನಿವಾಸ ನಾಯಕ, ಡಾ.ಬಂಡಳ್ಳಿ ಕುಮಾರ್, ಡಾ.ಕಳಲೆ ಮಹೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • increase reservation
ತಿ.ನರಸೀಪುರ: ಮೈಸೂರಿಗೆ ಇತ್ತೀಚೆಗೆ ಆಗಮಿಸಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಭೇಟಿ ಮಾಡಿ ಪ.ಜಾತಿ ಮತ್ತು ಪ.ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಪ.ಜಾತಿಗೆ ಶೇ.17, ಪಂ.ಪಂಗಡಕ್ಕೆ ಶೇ.7 ಮೀಸಲಾತಿಯನ್ನು ಹೆಚ್ಚಳ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಕೇಂದ್ರ ಸರ್ಕಾರ ಮೀಸಲಾತಿ ಹೆಚ್ಚಳದ ಮಸೂದೆಯನ್ನು ಷೆಡ್ಯೂಲ್ 9ಕ್ಕೆ ಸೇರಿಸದೆ ನಿರ್ಲಕ್ಷ್ಯ ಮಾಡಿತು ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಮೀಸಲಾತಿ ಹೆಚ್ಚಳಕ್ಕೆ ನ್ಯಾ. ನಾಗಮೋಹನ್ ದಾಸ್ ಸಮಿತಿಯನ್ನು ರಚಿಸಿ ವರದಿ ಪಡೆದು ಮೀಸಲಾತಿ ಹೆಚ್ಚಳದ ಮಸೂದೆಗೆ ರಾಜ್ಯಪಾಲರ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ನ್ಯಾಯಾಲಯದಲ್ಲಿ ತಕರಾರು ಬಂದ ಹಿನ್ನೆಲೆ ಸದ್ಯ ಮೀಸಲಾತಿ ಹೆಚ್ಚಳದ ಮಸೂದೆ ನಿಂತು ಹೋಗಿದೆ. ಹಾಗಾಗಿ ರಾಜ್ಯದಲ್ಲಿ ಪ.ಜಾತಿ ಮತ್ತು ಪ.ಪಂಗಡದ ಜನರು ಬಹು ಸಂಖ್ಯಾತರಾಗಿದ್ದು, ಇವರನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರ 54,632 ಹುದ್ದೆಗಳಿಗೆ ಹಳೆಯ ಮೀಸಲಾತಿಯ ಮುಖೇನ ನೇಮಕಾತಿಗೆ ಮುಂದಾಗಿದೆ. ಇದು ಈ ಎರಡೂ ಸಮುದಾಯಗಳಿಗೆ ಮಾಡಿದ ಅನ್ಯಾಯ. ಇದರಿಂದ ಪ.ಪಂಗಡಕ್ಕೆ 8 ಸಾವಿರ ಹುದ್ದೆಗಳು ನಷ್ಟ ಆಗಲಿವೆ. ಈ ಬಗ್ಗೆ ನೀವು ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.
ಮುಖಂಡರಾದ ಎಂ.ರಾಮಚಂದ್ರ, ಶ್ರೀನಿವಾಸನಾಯಕ, ಡಾ.ಬಂಡಳ್ಳಿ ಕುಮಾರ್, ಡಾ.ಕಳಲೆ ಮಹೇಶ್, ಮಹದೇವ ನಾಯಕ ಹಾಗೂ ನಾಯಕ ಸಮಾಜದ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net