ರೈತರಿಂದ ರಾಗಿ ಖರೀದಿ

ರಾವಂದೂರು ಗ್ರಾಮದಲ್ಲಿ ತೆರೆದಿರುವ ಖರೀದಿ ಕೇಂದ್ರಕ್ಕೆ ಬಂದಿರುವ ರಾಗಿ ಚೀಲಗಳು.
ರಾವಂದೂರು ಗ್ರಾಮದಲ್ಲಿ ತೆರೆದಿರುವ ಖರೀದಿ ಕೇಂದ್ರಕ್ಕೆ ಬಂದಿರುವ ರಾಗಿ ಚೀಲಗಳು.
Published on
ರಾವಂದೂರು: ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದ್ದು, ಗುರುವಾರದಿಂದ ರೈತರಿಂದ ರಾಗಿ ಖರೀದಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಪ್ರತಿನಿತ್ಯ ನಿಗದಿಪಡಿದಷ್ಟು ರಾಗಿಯನ್ನು ರೈತರಿಂದ ಖರೀದಿಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ. ಕೇಂದ್ರಕ್ಕೆ ತರುವಾಗ ರಾಗಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ರೈತರು ಮುಂಚಿತವಾಗಿ ಬರುವುದನ್ನು ಬಿಟ್ಟು ನಿಗದಿತ ಸಮಯಕ್ಕೆ ರಾಗಿಯನ್ನು ತರಬೇಕು ಎಂದು ಕೇಂದ್ರದ ಮೇಲ್ವಿಚಾರಕಿ ಗೀತಾ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net