ಬಿಳಿಗಿರಿ ರಂಗನಾಥಸ್ವಾಮಿಗೆ ಪೂಜಾ ಮಹೋತ್ಸವ

ಸರಗೂರಿನ ಪಟ್ಟಣದ ಆರನೇ ವಾರ್ಡ್‌ನಲ್ಲಿರುವ  ಈಡಿಗರ ಬೀದಿಯಲ್ಲಿ ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.
ಸರಗೂರಿನ ಪಟ್ಟಣದ ಆರನೇ ವಾರ್ಡ್‌ನಲ್ಲಿರುವ ಈಡಿಗರ ಬೀದಿಯಲ್ಲಿ ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.
Published on
ಸರಗೂರು: ಪಟ್ಟಣದ ಆರನೇ ವಾರ್ಡ್‌ನ ಈಡಿಗರ ಬೀದಿಯ ದೊಡ್ಡಅಟ್ಟಿಯಲ್ಲಿರುವ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಸ್ಥಾನವನ್ನು ತಳಿರು-ತೋರಣ, ಬಣ್ಣ ಬಣ್ಣದ ರಂಗೋಲಿ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮೊದಲನೇ ಮುಖ್ಯ ರಸ್ತೆ, ದೊಡ್ಡಅಟ್ಟಿ ಹಾಗೂ ನೃಪತುಂಗ ಸರ್ಕಲ್ ಬಗೆಬಗೆಯ ಹೂವು ಹಾಗೂ ವಿದ್ಯುತ್‌ದೀಪಗಳಿಂದ ಝಗಮಗಿಸುತ್ತಿತ್ತು. ಮುಂಜಾನೆಯೇ ದೇವಸ್ಥಾನದ ಕೃಷ್ಣ ಹಾಗೂ ವೇಣುಗೋಪಾಲ್ ಪೂಜಾ ಕೈಂಕರ್ಯ ನೆರವೇರಿಸಿದರು. ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ಅನ್ನದಾನ ಮಾಡಲಾಯಿತು.
ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ಸ್ ಅಂತಾರಾಷ್ಟ್ರೀಯ ಸಂಸ್ಥೆ, ಅಲೈನ್ಸ್ ಕ್ಲಬ್ ವಲ್ಲಭಭಾಯಿ ಹಾಗೂ ನೇತಾಜಿ ಮತ್ತು ದೊಡ್ಡಟ್ಟಿ ಗೆಳೆಯರ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಶಿವರಾತ್ರಿ ಹಬ್ಬದ ಜಾಗರಣೆ ಪ್ರಯುಕ್ತ ಮಹಿಳೆಯರು ಹಾಗೂ ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಚೇರ್, ಡಾನ್ಸ್, ವಾಲಿಬಾಲ್, ಕ್ರಿಕೆಟ್ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಜೆ ಅಪ್ಪು ಬ್ರದರ್ ವೃಂದದಿಂದ ರಸಮಂಜರಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿಯಿಂದ ಕಾರ್ಯಕ್ರಮ ನೆರವೇರಿತು.
ವಾರ್ಡ್ ಮಾಜಿ ಸದಸ್ಯರಾದ ರಾಧಿಕಾ ಶ್ರೀನಾಥ್, ದೊಡ್ಡ ಅಟ್ಟಿಯ ಮುಖ್ಯಸ್ಥ ನಾಗೇಗೌಡ, ಆರ್ಯ ಈಡಿಗ ಸಮಾಜದ ಯಜಮಾನ ಎಸ್.ಎನ್.ನಾಗರಾಜು, ವಕೀಲೆ ಮಂಜುಳಾ, ಬುಲೆಟ್ ಮಂಜುನಾಥ, ಮುಖಂಡರಾದ ಶ್ರೀನಾಥ್, ರಾಜಣ್ಣ, ಎಸ್.ಎನ್.ಕೃಷ್ಣಪ್ಪ, ಎಸ್.ಟಿ.ವೇಣುಗೋಪಾಲ್, ಆನಂದ್, ಲಕ್ಷ್ಮಣ್, ಜಗದೀಶ್, ಗಣಪತಿ, ಮಹೇಶ್, ಶ್ರೀನಿವಾಸ್, ಕಾಳಪ್ಪ, ಪುಷ್ಪಾ, ಪೂರ್ಣಿಮಾ, ಕುಮಾರಿ, ಭಾರತಿ, ಶೋಭಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net