ಜು.4ರಂದು ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ನಡೆದ ಸಂಧಾನದಲ್ಲಿ, 10 ಜನರಿಗೆ ಒಂದು ತಿಂಗಳೊಳಗೆ ಕಾಯಂ ಉದ್ಯೋಗ ಹಾಗೂ 32 ಜನರಿಗೆ ಪ್ರೊಬೇಷನರಿ ಹುದ್ದೆ ನೀಡಿ ವರ್ಷದೊಳಗೆ ಕಾಯಂಗೊಳಿಸುವುದಾಗಿ ಮತ್ತೆ ಲಿಖಿತ ಭರವಸೆ ನೀಡಲಾಗಿತ್ತು. ಆದರೆ ಈ ಮಾತೂ ಹುಸಿಯಾಗಿದೆ. ಆ.11ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, 15 ದಿನಗಳ ಬಳಿಕ ಮತ್ತೊಮ್ಮೆ ಸಭೆ ನಡೆಸಿ 5 ಜನರ ಕಾಯಂ ಉದ್ಯೋಗ ಹಾಗೂ 32 ಜನರ ಪ್ರೊಬೇಷನರಿ ಹುದ್ದೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ನಿರ್ಧರಿಸಲಾಗಿತ್ತು. ಆದರೆ ನಿಗದಿತ ಅವಧಿ ಮುಗಿದರೂ ಸಭೆ ಕರೆಯದೆ ರೈತರಿಗೆ ವಂಚಿಸಲಾಗಿದೆ ಎಂದು ಕಿಡಿ ಕಾರಿದರು.