ಕೃಷಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ

  ಕೃಷಿಕರ ವಿವಿಧ ಬೇಡಿಕೆಗಳನ್ನು  ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದ ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ಎ.ಎಸ್.ರಾಮಪ್ರಸಾದ್ ಅವರನ್ನು ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಮತ್ತು ಪೊಲೀಸ್ ಇನ್‌ಸೆಕ್ಟರ್ ಶಿವಪ್ರಕಾಶ್ ಅವರು ಮನವೊಲಿಸುತ್ತಿರುವುದು.

Published on
ಕೆ.ಆರ್.ನಗರ : ತಾಲೂಕು ಭತ್ತದ ಕಣಜವಾಗಿದ್ದು ಇಲ್ಲಿನ ರೈತರ ಅನುಕೂಲಕ್ಕಾಗಿ ಭತ್ತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಮತ್ತು ಕೃಷಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕು ಯುವ ರೈತ ವೇದಿಕೆಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತಾಲೂಕು ಕಚೇರಿ ಮುಂಭಾಗ ಛಾಪೆ ಹಾಸಿಕೊಂಡು ಮಲಗುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ ಸಂಘಟನೆ ಅಧ್ಯಕ್ಷ ಎ.ಎಸ್.ರಾಮಪ್ರಸಾದ್, ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ರೈತರಿಂದ ಭತ್ತ ಖರೀದಿ ಮಾಡಿದೆ. ಆದರೆ ಬೆಂಬಲ ಬೆಲೆಯ ಹಣವನ್ನು ಈವರೆಗೂ ರೈತರ ಖಾತೆಗೆ ಜಮಾ ಮಾಡಿಲ್ಲ, ರಾಗಿ ಖರೀದಿಯಲ್ಲಿ 1ಕ್ವಿಂಟಾಲ್‌ಗೆ 5 ಕೆ.ಜಿ. ಕಳೆಯುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಬೆಳಗಿನಿಂದ ಸಂಜೆಯವರೆಗೆ ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ 3 ಫೇಸ್ ವಿದ್ಯುತ್ ಸಂಪರ್ಕ ನೀಡಬೇಕು ಕನಿಷ್ಠ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ರೈತರ ಸಭೆ ನಡೆಸಿ ಕುಂದು,ಕೊರತೆ ಆಲಿಸಬೇಕೆಂದು ಒತ್ತಾಯಿಸಿದರು. ಶ್ರೀರಾಮ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯವನ್ನು ಶೀಘ್ರವೇ ಆರಂಭಿಸಬೇಕು
ಎಂದು ಅವರು ಒತ್ತಾಯಿಸಿದರು. ನಂತರ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net