ಪ್ರಸ್ತುತ ಜಗತ್ತಿಗೆ ಬೇಕಾಗಿರುವುದು ಶಾಂತಿಯೇ ಹೊರತು ಯುದ್ಧವಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಸರ್ವಾಧಿಕಾರಿ ಧೋರಣೆ ನಿಲ್ಲಿಸಬೇಕು. ಯುದ್ಧದಿಂದ ಹಲವಾರು ಜನರು ನಲುಗಿ ಹೋಗಿದ್ದು, ಹಲವಾರು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಯುದ್ಧವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು. ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.