ಕನ್ನಡ ಭಾಷೆಯಲ್ಲಿ ಚಲನ್‌ಗಳನ್ನು ಮುದ್ರಿಸಲು ಒತ್ತಾಯಿತಿ ಪ್ರತಿಭಟನೆ

 ಅಂಚೆ ಕಚೇರಿಗಳಲ್ಲಿ ನೀಡುವ ಚಲನ್‌ಗಳನ್ನು ಕನ್ನಡ ಭಾಷೆಯಲ್ಲಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಲೋಕೇಶ್‌ಗೌಡ, ಗೋಲ್ಡ್ ಸುರೇಶ್, ಪ್ರಭುಶಂಕರ್, ಪ್ರಜೀಶ್, ಕೃಷ್ಣನ್, ಮೊಗಣಾಚಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ಸಿಂಧುವಳ್ಳಿ ಶಿವಕುಮಾರ್, ನೇಹಾ, ನರಸಿಂಹೇಗೌಡ, ಭಾಗ್ಯಮ್ಮ ಇತರರು ಇದ್ದರು.
ಅಂಚೆ ಕಚೇರಿಗಳಲ್ಲಿ ನೀಡುವ ಚಲನ್‌ಗಳನ್ನು ಕನ್ನಡ ಭಾಷೆಯಲ್ಲಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಲೋಕೇಶ್‌ಗೌಡ, ಗೋಲ್ಡ್ ಸುರೇಶ್, ಪ್ರಭುಶಂಕರ್, ಪ್ರಜೀಶ್, ಕೃಷ್ಣನ್, ಮೊಗಣಾಚಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ಸಿಂಧುವಳ್ಳಿ ಶಿವಕುಮಾರ್, ನೇಹಾ, ನರಸಿಂಹೇಗೌಡ, ಭಾಗ್ಯಮ್ಮ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಯೋಜನೆಗಳಲ್ಲಿ ಹಣ ತುಂಬುವ ಚಲನ್‌ಗಳು ಕನ್ನಡದಲ್ಲಿ ನೀಡುತ್ತಿಲ್ಲ
  • ನೆರೆಯ ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಚಲನ್ ಮುದ್ರಿತವಾಗಿರುವಾಗ ನಮ್ಮ ರಾಜ್ಯದಲ್ಲಿ ಕನ್ನಡ ಏಕೆ ಮುದ್ರಿತವಾಗಿಲ್ಲ
ಮೈಸೂರು:ಅಂಚೆ ಕಚೇರಿಗಳಲ್ಲಿ ನೀಡುವ ಚಲನ್‌ಗಳನ್ನು ಕನ್ನಡ ಭಾಷೆಯಲ್ಲಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿ ಮುಂಭಾಗ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ, ಪಿಪಿಎಫ್ ಹಾಗೂ ಅಂಚೆ ಕಚೇರಿಯ ವಿವಿಧ ಯೋಜನೆಗಳಲ್ಲಿ ಹಣ ತುಂಬುವ ಚಲನ್‌ಗಳು ಕನ್ನಡದಲ್ಲಿ ನೀಡುತ್ತಿಲ್ಲ ಎಂದು ದೂರಿದರು.
ಚಲನ್‌ನ ಒಂದು ಭಾಗದಲ್ಲಿ ಇಂಗ್ಲಿಷ್, ಮತ್ತೊಂದು ಭಾಗದಲ್ಲಿ ಹಿಂದಿ ಮುದ್ರಿತವಾಗಿರುವುದು ಕನ್ನಡಿಗರಿಗೆ ನೋವಿನ ಸಂಗತಿ. ಇದು ಕನ್ನಡ ವಿರೋಧಿ ಧೋರಣೆ. ಇದರಿಂದ ಹಿಂದಿ ಹಾಗೂ ಇಂಗ್ಲಿಷ್ ಬಾರದ ಸ್ಥಳೀಯ ಕನ್ನಡಿಗರು ಚಲನ್ ತುಂಬಲು ಬೇರೆಯವರನ್ನು ಆಶ್ರಯಿಸಬೇಕಾಗಿರುವುದು ದುರದೃಷ್ಟಕರ ಎಂದು ಕಿಡಿಕಾರಿದರು.

ಒಕ್ಕೂಟದ ವ್ಯವಸ್ಥೆಯಲ್ಲಿ ನೆರೆಯ ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಚಲನ್ ಮುದ್ರಿತವಾಗಿರುವಾಗ ನಮ್ಮ ರಾಜ್ಯದಲ್ಲಿ ಕನ್ನಡ ಏಕೆ ಮುದ್ರಿತವಾಗಿಲ್ಲ? ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.
ಅಂಚೆ ಕಚೇರಿ ಚಲನ್‌ಗಳು ದೇಶದ ಯಾವುದೇ ರಾಜ್ಯದಲ್ಲಾದರೂ, ಆಯಾ ಸ್ಥಳೀಯ ಭಾಷೆಗಳಲ್ಲಿ ಮುದ್ರಿತವಾಗಬೇಕು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಆಡಳಿತ ಭಾಷೆ ಕನ್ನಡದಲ್ಲಿಯೇ ಇರಬೇಕು. ರಾಜ್ಯದ ಎಲ್ಲ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ, ಅಂಚೆ ಕಚೇರಿ ಚಲನ್‌ಗಳಲ್ಲಿ ಕನ್ನಡ ಭಾಷೆಯನ್ನು, ಕಡ್ಡಾಯವಾಗಿ ಮುದ್ರಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಭಾರತೀಯ ಅಂಚೆ ಇಲಾಖೆ ಕನ್ನಡ ಭಾಷಾ ವಿರೋಧಿ ಧೋರಣೆ ಕೈಬಿಟ್ಟು, ಕನ್ನಡ ಭಾಷೆಯಲ್ಲಿ ಈ ಕೂಡಲೇ ಚಲನ್‌ಗಳನ್ನು ಮುದ್ರಿಸಬೇಕು. ಇಲ್ಲವಾದರೆ ರಾಜ್ಯದ ಕನ್ನಡಿಗರೆಲ್ಲ ಸೇರಿ, ಅಂಚೆ ಕಚೇರಿ ಬಹಿಷ್ಕರಿಸಿ, ರಾಜ್ಯದಲ್ಲಿರುವ ಎಲ್ಲ ಅಂಚೆ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಮುಖಂಡರಾದ ಗೋಲ್ಡ್ ಸುರೇಶ್, ಪ್ರಭುಶಂಕರ್, ಪ್ರಜೀಶ್, ಕೃಷ್ಣನ್, ಮೊಗಣಾಚಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ಸಿಂಧುವಳ್ಳಿ ಶಿವಕುಮಾರ್, ನೇಹಾ, ನರಸಿಂಹೇಗೌಡ, ಭಾಗ್ಯಮ್ಮ, ವರಕೂಡು ಕೃಷ್ಣೇಗೌಡ, ಮಂಜುಳಾ, ಜ್ಯೋತಿ, ಗೀತಾಗೌಡ, ಇಂದಿರಾ, ಸುಜಾತಾ, ರಾಧಾಕೃಷ್ಣ, ಸುಶೀಲಾ, ವಾಣಿ, ಗೀತಾ, ತಾಯೂರು ಗಣೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net