ದಾಖಲೆಗಳನ್ನು ನೀಡಲು ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಬನ್ನೂರು ನಾರಾಯಣ, ದೇವರಾಜು, ಶಿವಣ್ಣ, ಸ್ವಾಮಿರಾಜು, ಶಿವರಾಮು, ಕೃಷ್ಣೆಗೌಡ, ಆನಂದ, ವಿಶ್ವನಾಥ್, ರಾಜು, ನಿತ್ಯಾನಂದ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು, ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ
ರೈತರಿಗೆ ಸಕಾಲದಲ್ಲಿ ಕೆಲಸ, ಕಾರ್ಯ ನಡೆಯುತ್ತಿಲ್ಲ
ಮೈಸೂರು:ರೈತರಿಗೆ ಅಬರ ಜಮೀನಿನ ದಾಖಲೆಗಳನ್ನು ನೀಡಲು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ)ದಿಂದ ಮೈಸೂರು ಕಾರ್ಯಸೌಧದ ಬಳಿ ಪ್ರತಿಭಟನೆ ನಡೆಯಿತು.
ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಇರುವ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು, ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ. ವಿನಾಕಾರಣ ಕಚೇರಿಗೆ ಅಲೆಸುತ್ತಿದ್ದಾರೆ. ಇದರಿಂದ ರೈತರಿಗೆ ಸಕಾಲದಲ್ಲಿ ಕೆಲಸ, ಕಾರ್ಯ ನಡೆಯುತ್ತಿಲ್ಲ. ಜಮೀನು ಕೆಲಸ ಬಿಟ್ಟು ನಿತ್ಯ ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು.
ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಬೇಕು. ನ್ಯಾಯಾಲಯದಲ್ಲಿ ತೀರ್ಪು ಆಗಿರುವ ಜಮೀನಿಗಳಿಗೆ ಹದ್ದುಬಸ್ತು ಮಾಡಿ ಅಗತ್ಯ ದಾಖಲೆಗಳನ್ನು ನೀಡಬೇಕು. ಇಲ್ಲವಾದರೆ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಕಚೇರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬನ್ನೂರು ನಾರಾಯಣ, ದೇವರಾಜು, ಶಿವಣ್ಣ, ಸ್ವಾಮಿರಾಜು, ಶಿವರಾಮು, ಕೃಷ್ಣೇಗೌಡ, ಆನಂದ, ವಿಶ್ವನಾಥ್, ರಾಜು, ನಿತ್ಯಾನಂದ ಇತರರು ಇದ್ದರು.