ದಲಿತರ ಮೇಲಿನ ದೌರ್ಜನ್ಯಕ್ಕೆ ಖಂಡಿಸಿ ಪ್ರತಿಭಟನೆ

 ರಾಯಚೂರು ಜಿಲ್ಲೆಯಲ್ಲಿ ದಲಿತರ ಕೊಲೆ ಅತ್ಯಾಚಾರ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ, ವಿದ್ಯಾರ್ಥಿ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಬನ್ನಹಳ್ಳಿ ಸೋಮಣ್ಣ, ನಾಗರಾಜ್ ವಾಟಾಳ್, ಧಮ್ಮ ಅಶೋಕ, ಬಲರಾಮ, ಅನುಷಾ, ಚಾಮರಾಜ ಇಲವಾಲ ಇತರರಿದ್ದರು.
ರಾಯಚೂರು ಜಿಲ್ಲೆಯಲ್ಲಿ ದಲಿತರ ಕೊಲೆ ಅತ್ಯಾಚಾರ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ, ವಿದ್ಯಾರ್ಥಿ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಬನ್ನಹಳ್ಳಿ ಸೋಮಣ್ಣ, ನಾಗರಾಜ್ ವಾಟಾಳ್, ಧಮ್ಮ ಅಶೋಕ, ಬಲರಾಮ, ಅನುಷಾ, ಚಾಮರಾಜ ಇಲವಾಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಲಿತರ ಮೇಲಿನ ದೌರ್ಜನ್ಯಕ್ಕೆ ಖಂಡನೆ
  • ದಸಂಸ, ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆ
ಮೈಸೂರು: ರಾಯಚೂರು ಜಿಲ್ಲೆಯಲ್ಲಿ ದಲಿತರ ಕೊಲೆ ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ, ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಈ ದೌರ್ಜನ್ಯ ಖಂಡಿಸಿದರು. ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಎಂಬಂತಹ ದಲಿತ ಹೋರಾಟಗಾರರು ಅನ್ಯಾಯವನ್ನು ಖಂಡಿಸಿ ನ್ಯಾಯ ಕೇಳಿದ್ದಕ್ಕೆ ಅಮಾನವೀಯವಾಗಿ ಕೊಲೆ ಮಾಡಲಾಗಿದೆ. ದಲಿತರ ಜೀವಗಳಿಗೆ ಬೆಲೆಯೇ ಇಲ್ಲವೇ? ಎಂದು ಪ್ರಶ್ನಿಸಿದರು. 
ಸಿರವಾರ ತಾಲೂಕಿನ ಹೊಕ್ರಾನಿ ಗ್ರಾಮದಲ್ಲಿ ಬಹಿದೆರ್ಸೆಗೆ ತೆರಳಿದ್ದ ದಲಿತ ಸಮುದಾಯದ ಅಶ್ವಿನಿ ಎಂಬ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣೆಮ್ಮ ಎಂಬ ಮಹಿಳೆಯನ್ನು ಹೊಲದಲ್ಲಿ ಕೊಲೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ತಿಂಗಳಲ್ಲಿ ಸರಣಿ ಕೊಲೆ ಅತ್ಯಾಚಾರಗಳು ನಡೆದಿದೆ. ಈ ಘಟನೆಯ ಕಿಡಿಗೇಡಿಗಳ ವಿರುದ್ಧ ಕಂಠಿಣ ಕ್ರಮ ಕ್ಯಗೊಳ್ಳಬೇಕೆಂದು  ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ನಾಗರಾಜ್ ವಾಟಾಳ್, ಜಿಲ್ಲಾ ವಿದ್ಯಾರ್ಥಿ ಸಂಚಾಲಕ ಧಮ್ಮ ಅಶೋಕ, ಬಲರಾಮ, ಅನುಷಾ, ಚಾಮರಾಜ ಇಲವಾಲ, ಪ್ರಕಾಶ್ ಹೆಗ್ಗಡಳ್ಳಿ, ಸಣ್ಣಕುಮಾರ್ ಎಚ್.ಡಿ.ಕೋಟೆ, ಬಸವರಾಜು ಬನ್ನಹಳ್ಳಿ, ರಾಮು ಮಾದಿಗಳ್ಳಿ, ಲಕ್ಷ್ಮಣ್ ಇಲವಾಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net