ಹಣ ಕಳೆದುಕೊಂಡಿದ್ದ ರೈತ ಮರುದಿನ ಕಂಡಕ್ಟರ್‌ಗೆ ವಿಚಾರಿಸಿದಾಗ, ಡಿಪೋಗೆ ಬಂದು ಸೂಕ್ತ ದಾಖಲೆ ನೀಡಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಮಂಗಳವಾರ ದಾಖಲಾತಿಗಳೊಂದಿಗೆ ರೈತ ಬಸವರಾಜು ಡಿಪೋ ವ್ಯವಸ್ಥಾಪಕ ಎಂ.ಶೇಷುಮೂರ್ತಿ ಅವರ ಸಮ್ಮಖದಲ್ಲಿ ಹಣ ಪಡೆದುಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ. ಚಾಲಕ-ನಿರ್ವಾಹಕರಿಬ್ಬರ ಬದ್ಧತೆಗೆ ಶೇಷುಮೂರ್ತಿ ಹಾಗೂ ಅಧಿಕಾರಿಗಳು ಅಭಿನಂದಿಸಿದ್ದಾರೆ.