ಸರ್ಕಾರ ನಿಮ್ಮ ಬಳಿಯಲ್ಲಿಯೇ ಇದ್ದು, ಮಧ್ಯರಾತ್ರಿ ಬೇಕಾದರೂ ಸಂಘದ ಮೇಲೆ ದಾಳಿ ನಡೆಸಬಹುದು, ನಿಮಗೆ ಯಾರು ಬೇಡ ಅನ್ನುತ್ತಾರೆ. ಆದರೆ, ನಿಮಗೆ ಆ ವಿಚಾರ ಬೇಕಾಗಿಲ್ಲ, ರಾಜಕೀಯವಾಗಿ ಆರ್‌ಎಸ್‌ಎಸ್ ಮೇಲೆ ಗೂಬೆ ಕೂರಿಸುವುದಷ್ಟೇ ನಿಮ್ಮ ಉದ್ದೇಶ. ಆ ಕೆಲಸವನ್ನು ಪ್ರಿಯಾಂಕ್ ಖರ್ಗೆ ಮಾಡುತ್ತಿದ್ದಾರೆ. ಅವರು ಆ ಕೆಲಸವನ್ನು ಮುಂದುವರೆಸಲಿ. ಅವರ ಹಿರಿಯರು ಕೂಡ ಇದನ್ನೇ ಮಾಡಿಕೊಂಡು ಬಂದರು. ರಾಜಕೀಯ ದೃಷ್ಟಿಕೋನದಿಂದ ಮಾತ್ರ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿರೋಧಿಸಲಾಗುತ್ತಿದೆ. ಸಂಘ ಬೆಳೆದರೆ ನಮಗೆ ತೊಂದರೆ ಆಗುತ್ತದೆ ಎಂಬ ಭಯವೇ ಇದಕ್ಕೆ ಕಾರಣ ಎಂದರು.