ಪರಂಪರೆ ಕೂಟ ಸಂಚಾಲಕ, ಇತಿಹಾಸ ವಿಭಾಗದ ಮುಖ್ಯಸ್ಥ ಆರ್.ಚಲುವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷ ಉಪನ್ಯಾಸದ ನಂತರ ವಿದ್ಯಾರ್ಥಿಗಳು ತಲಕಾಡು ಪಟ್ಟಣದ ರಸ್ತೆಗಳಲ್ಲಿ ಸಮುದಾಯ ಜಾಗೃತಿ ಜಾಥಾ ನಡಿಸಿ, ಮುಖ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಯ ಕುರಿತು ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು. ಮಧ್ಯಾಹ್ನ ವಿದ್ಯಾರ್ಥಿಗಳು ತಲಕಾಡಿನ ಪಾರಂಪರಿಕ ಸ್ಥಳಗಳಾದ ಗೌರಿಶಂಕರ ದೇವಾಲಯ, ಕಲ್ಯಾಣಿ ಹಾಗೂ ಕಾವೇರಿ ನಿಸರ್ಗಧಾಮ ಪ್ರದೇಶದ ಸ್ಮಾರಕಗಳ ಸ್ವಚ್ಛತಾ ಕಾರ್ಯದ ಮೂಲಕ ಪರಂಪರೆ ಕೂಟವನ್ನು ಯಶಸ್ವಿಗೊಳಿಸಿದರು. ತಲಕಾಡು ಪೊಲೀಸರು ಸೇರಿದಂತೆ, ಅರಣ್ಯ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿ ಸಹಕರಿಸಿದರು.