ಪ್ರಜಾಪಿತ ಬ್ರಹ್ಮಾಕುಮಾರಿ ಸಂಸ್ಥೆಯಿಂದ ಮೈಸೂರಿನಲ್ಲಿ ಫೆ.8 ರಿಂದ ‘ಜ್ಞಾನ ವಿಜ್ಞಾನ ದಿವ್ಯದರ್ಶನ ಮೇಳ’

‘ಜ್ಞಾನ ವಿಜ್ಞಾನ ದಿವ್ಯದರ್ಶನ ಮೇಳ’ದ ಕುರಿತು ಸಂಸ್ಥೆಯ ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ಡಾ.ಬಿ.ಕೆ. ಲಕ್ಷ್ಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಜ್ಞಾನ ವಿಜ್ಞಾನ ದಿವ್ಯದರ್ಶನ ಮೇಳ’ದ ಕುರಿತು ಸಂಸ್ಥೆಯ ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ಡಾ.ಬಿ.ಕೆ. ಲಕ್ಷ್ಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Published on
ಮೈಸೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಫೆ.8 ರಿಂದ 22ರವರೆಗೆ ನಗರದ ಹುಣಸೂರು ರಸ್ತೆಯ ಭಾರತೀಯ ವಿದ್ಯಾಭವನ ಮುಂಭಾಗದ ನಿವೇಶನದಲ್ಲಿ ‘ಜ್ಞಾನ ವಿಜ್ಞಾನ ದಿವ್ಯದರ್ಶನ ಮೇಳ’ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ಡಾ.ಬಿ.ಕೆ. ಲಕ್ಷ್ಮೀಜಿ ಹೇಳಿದರು.
ಮೇಳದಲ್ಲಿ ಶ್ರೀ ಸೋಮನಾಥ ಮಂದಿರದ ಪ್ರತಿರೂಪ, ಮಾದಕದ್ರವ್ಯ ಸೇವನೆ ವಿರುದ್ಧ ಜಾಗೃತಿ, ಕಂಪ್ಯೂಟರ್ ಪ್ರೋಗ್ರಾಮ್ ಮೈಂಡ್ ಸ್ಪಾ, ಗೃಹಸ್ಥರು ಸಾಮರಸ್ಯದಿಂದಿರಲು ಪ್ರಾಯೋಗಿಕ ಚಿತ್ರಪ್ರದರ್ಶನ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮತ್ತು ಗುರಿ ಸಾಧನೆಯ ಬಗ್ಗೆ ಸಮಾಲೋಚನೆ, ಮೌಲ್ಯಗಳ ಪ್ರಯೋಜನ ವಿವರಿಸುವ ಆಟಗಳು ಮತ್ತು ಧ್ಯಾನ ಶಿಬಿರ ಸೇರಿದಂತೆ ವಿವಿಧ ಚಟುವಟಿಕೆ ಗಳನ್ನು ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಫೆ.8 ರಂದು ಸಂಜೆ 6ಕ್ಕೆ ಆಯೋಜಿಸಿರುವ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಜೀವಮಾನ ಸಾಧನೆಗಾಗಿ ಸಾಹಿತಿ ಕೆ.ಸಿ. ಶಿವಪ್ಪ, ಭರತನಾಟ್ಯಪಟು ಡಾ. ವಸುಂಧರಾ ದೊರೆಸ್ವಾಮಿ ಅವರಿಗೆ ಈಶ್ವರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಫೆ.11 ರಂದು ಸಂಜೆ 6.30ಕ್ಕೆ ಸಂಸ್ಥೆಯ ಮೈಸೂರು ಉಪ ವಲಯದ ಆರು ದಶಕಗಳ ಸೇವೆಯ ವಾರ್ಷಿಕೋತ್ಸವ ಸಮಾರಂಭ, 13 ರಂದು ಸಂಜೆ 6.30ಕ್ಕೆ ಸರ್ವಧರ್ಮ ಸಮ್ಮೇಳನ, 15 ರಂದು ಸಂಜೆ 6.30ಕ್ಕೆ ಮಹಾಶಿವರಾತ್ರಿ ಆಯೋಜಿಸಲಾಗಿದೆ. ಫೆ.22 ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು, ಅತಿಥಿಗಳಾಗಿ ವಿಜ್ಞಾನಿ ಪ್ರೊ.ಕೆ.ಎಸ್. ರಂಗಪ್ಪ, ಗುಲ್ಬರ್ಗ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಇಟಿ. ಪುಟ್ಟಯ್ಯ, ಹಿರಿಯ ವಕೀಲ ಓ. ಶಾಂ ಭಟ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕುಮಾರ ಬಿ.ಕೆ. ರಂಗನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net