ಕೇರಳ ಅಂಚೆ ವೃತ್ತದ ಕೆ.ಎಸ್.ನಿರಂಜನಾ ಕಿರಿಯರ ವಿಭಾಗದ ಭರತನಾಟ್ಯಂನಲ್ಲಿ ಪ್ರಥಮ, ದುರ್ಗಾರಾಂ ಹಿರಿಯರ ವಿಭಾಗದ ಮೋಹಿನಿ ಆಟ್ಟಂನಲ್ಲಿ ಪ್ರಥಮ, ಗೌತಮ್ ಗಣೇಶ್ ಹಿರಿಯರ ವಿಭಾಗದ ಕಥಕಳಿ ನೃತ್ಯದಲ್ಲಿ ಪ್ರಥಮ, ಎನ್.ನಯನಾ ವಾಸುದೇವ್ ಅವರು ಹಿರಿಯರ ವಿಭಾಗದ ಕರ್ನಾಟದ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನ ಮತ್ತು ಕೆ.ಎನ್.ಶಿವಾನಂದನ ಅವರು ಕಿರಿಯರ ವಿಭಾಗದ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನ ಪಡೆದರು.