ನೊಂದವರ ಧ್ವನಿ ಅಂಬೇಡ್ಕರ್

ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ತಹಸೀಲ್ದಾರ್ ನಿಸರ್ಗಪ್ರಿಯ, ಇಒ ಸುನೀಲ್ ಕುಮಾರ್, ಪ್ರೊ.ಡಾ.ರಾಚಪ್ಪಾಜಿ, ಟಿ.ಈರಯ್ಯ, ಪಿ. ಮಹದೇವ್, ಕಾಮರಾಜ್, ಪಿ.ಪಿ.ಮಹದೇವ್ ಇದ್ದರು.
ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ತಹಸೀಲ್ದಾರ್ ನಿಸರ್ಗಪ್ರಿಯ, ಇಒ ಸುನೀಲ್ ಕುಮಾರ್, ಪ್ರೊ.ಡಾ.ರಾಚಪ್ಪಾಜಿ, ಟಿ.ಈರಯ್ಯ, ಪಿ. ಮಹದೇವ್, ಕಾಮರಾಜ್, ಪಿ.ಪಿ.ಮಹದೇವ್ ಇದ್ದರು.
Published on
ಪಿರಿಯಾಪಟ್ಟಣ: ಸರ್ವರಿಗೂ ಸ್ವಾತಂತ್ರೃ, ಸಮಾನತೆ ಮತ್ತು ಭ್ರಾತೃತ್ವವನ್ನು ನೀಡುವುದು ಸಂವಿಧಾನದ ಮೂಲ ಉದ್ದೇಶವಾಗಿದೆ ಎಂದು ಮೈಸೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಪ್ರೊ.ಡಾ.ರಾಚಪ್ಪಾಜಿ ತಿಳಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ವಿದ್ಯಾರ್ಥಿ ಜೀವನದಿಂದಲೂ ಸಾಕಷ್ಟು ನೋವು ಮತ್ತು ಅಪಮಾನ ಅನುಭವಿಸಿದರು. ಇದನ್ನು ಇತರರು ಅನುಭವಿಸಬಾರದು ಎಂಬ ಪರಿಕಲ್ಪನೆಯಲ್ಲಿ ಭಾರತಕ್ಕೆ ಉತ್ತಮವಾದ ಸಂವಿಧಾನ ರಚಿಸಿ ನೊಂದವರ ಧ್ವನಿಯಾಗಿದ್ದಾರೆ ಎಂದರು. 
ತಹಸೀಲ್ದಾರ್ ನಿಸರ್ಗ ಪ್ರಿಯ ಮಾತನಾಡಿ, ಸಂವಿಧಾನವನ್ನು ಹೊರತುಪಡಿಸಿ ಜೀವನ ನಡೆಸಲು ಸಾಧ್ಯವಿಲ್ಲ. ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಮತ್ತು ಶ್ರಮ ಅಪಾರವಾಗಿದೆ. ಅನ್ಯಾಯವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವ ಮೊದಲು ಸಂವಿಧಾನದಲ್ಲಿನ ಕಾನೂನನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.
ಶಿಕ್ಷಕ ಕಾಂತರಾಜು ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂವಿಧಾನ ಕುರಿತ ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತಾಪಂ ಇಒ ಸುನೀಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರೇಗೌಡ, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್, ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ್, ಸೆಸ್ಕ್ ಎಇಇ ಬಸವರಾಜ್, ಮುಖಂಡರಾದ ಟಿ.ಈರಯ್ಯ, ಪಿ.ಮಹದೇವ್, ಕಾಮರಾಜ್, ಪಿ.ಪಿ.ಮಹದೇವ್, ಭೂತನಹಳ್ಳಿ ಶಿವಣ್ಣ, ಮಂಜು ಆಯಿತನಹಳ್ಳಿ, ರಾಜೇಶ್, ಚನ್ನಬಸವ, ವೆಂಕಟೇಶ್, ವಿಷ್ಣು, ಆರ್.ಡಿ.ಮಹದೇವ್, ರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net