ಸಫಾರಿಗೆ ಅನುಮತಿ: ರೈತರಿಂದ ವಿರೋಧ

ಸಫಾರಿ
ಸಫಾರಿ
Published on

ಪ್ರಮುಖ ಮುಖ್ಯಾಂಶಗಳು

  • ಒತ್ತಡಕ್ಕೆ ಮಣಿದು ಸಫಾರಿಗೆ ಅನುಮತಿ ನೀಡಿರುವುದು ಖಂಡನೀಯ
  • ಪ್ರಾಣಿಗಳ ಮುಕ್ತ ಓಡಾಟಕ್ಕೆ ಕಷ್ಟವಾಗಿ ಹೊರಗೆ ಬರುತ್ತಿವೆ
  • ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು ಬೀದಿಗೆ ಇಳಿದು ಹೋರಾಟ
ಮೈಸೂರು: ಅರಣ್ಯದ ಅಂಚಿನಲ್ಲಿ ವಾಸ ಮಾಡುವ ಗ್ರಾಮಗಳ ರೈತರ ಕಷ್ಟ ಅರಿಯದೆ, ಕಾಡು ಪ್ರಾಣಿಗಳು ಜನರ ಪ್ರಾಣ ಹಾನಿಯನ್ನೂ ಲೆಕ್ಕಿಸದೆ ಬಂಡವಾಳಶಾಹಿ ರೆಸಾರ್ಟ್ ಮಾಲೀಕರ ಒತ್ತಡಕ್ಕೆ ಮಣಿದು ಸಫಾರಿ ಪುನರಾರಂಭಕ್ಕೆ ಅನುಮತಿ ನೀಡಿರುವುದು ಖಂಡನಿಯ.
 ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.
ಕಾಡಿನಲ್ಲಿ ನಡೆಯುವ ಸಫಾರಿಯಿಂದ ಕಾಡು ಪ್ರಾಣಿಗಳು ಭಯಭೀತಿಯಿಂದ ಕಾಡಿನ ಹೊರಗೆ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ರೈತರ ಬೆಳೆಗಳನ್ನೂ ನಾಶ ಮಾಡುತ್ತಿವೆ. ಇದು ಸರ್ಕಾರಕ್ಕೆ ತಿಳಿದಿದ್ದರೂ ಒತ್ತಡಕ್ಕೆ ಮಣಿದು ಸಫಾರಿ ಅನುಮತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಪ್ರಾಣಿಗಳ ಸಂಖ್ಯೆ ಏರಿಕೆಯಾಗಿದೆ, ಕಾಡು ಪ್ರದೇಶ ಕಡಿಮೆಯಾಗಿದೆ ಎಂಬುದನ್ನು ಸರ್ಕಾರವೇ ಹೇಳುತ್ತದೆ. ಈ ರೀತಿಯಾದರೆ ಪ್ರಾಣಿಗಳ ಮುಕ್ತ ಓಡಾಟಕ್ಕೆ ಕಷ್ಟವಾಗಿ ಹೊರಗೆ ಬರುತ್ತಿವೆ ಎಂಬುದನ್ನು ಸರ್ಕಾರ ತಿಳಿಸಿದೆ. 
ಆದರೆ, ಅದಕ್ಕೆ ಬರುವ ಆದಾಯ ಮುಖ್ಯವಾಗಬಾರದು. ಜನ ಬದುಕು ಮುಖ್ಯವಾಗಿರಬೇಕು ಎಂಬುದನ್ನು ಸರ್ಕಾರ ಅರಿಯಬೇಕು. ಅರಣ್ಯ ಸಚಿವರು ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ಧಾರ ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net