ದೈವಭಕ್ತಿ, ದೇಶಭಕ್ತಿ ಮರೆಯುತ್ತಿರುವ ಜನ:ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥಸ್ವಾಮೀಜಿ ಬೇಸರ

ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಮಿತ್ರಮಂಡಳಿಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ರವೀಂದ್ರಜೋಶಿ ಅವರಿಗೆ ‘ಶ್ರೀಕೃಷ್ಣಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶ್ರೀಸುಬುಧೇಂದ್ರ ತೀರ್ಥಸ್ವಾಮೀಜಿ, ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಟಿ.ಎಸ್.ಶ್ರೀವತ್ಸ, ಎನ್.ಗೋಪಾಲಕೃಷ್ಣನ್, ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ.ಎಸ್.ಶೇಖರ್, ಸದಸ್ಯರಾದ ಪಿ.ಜಯರಾಮ್ ಭಟ್ , ಕೆ.ವಿ.ಶ್ರೀಧರ, ಟಿ.ಜಿ.ಗುರುಪ್ರಸಾದ್ ಇತರರು ಇದ್ದರು.
ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಮಿತ್ರಮಂಡಳಿಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ರವೀಂದ್ರಜೋಶಿ ಅವರಿಗೆ ‘ಶ್ರೀಕೃಷ್ಣಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶ್ರೀಸುಬುಧೇಂದ್ರ ತೀರ್ಥಸ್ವಾಮೀಜಿ, ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಟಿ.ಎಸ್.ಶ್ರೀವತ್ಸ, ಎನ್.ಗೋಪಾಲಕೃಷ್ಣನ್, ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ.ಎಸ್.ಶೇಖರ್, ಸದಸ್ಯರಾದ ಪಿ.ಜಯರಾಮ್ ಭಟ್ , ಕೆ.ವಿ.ಶ್ರೀಧರ, ಟಿ.ಜಿ.ಗುರುಪ್ರಸಾದ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸನಾತನ ಹಿಂದೂ ಧರ್ಮದ ಪ್ರಚಾರ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀಕೃಷ್ಣ ಮಿತ್ರ ಮಂಡಳಿ, ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಂತಸವಾಗಿದೆ
  • ಆಧುನೀಕತೆಯ ಪಾಶ್ಚಿಮಾತ್ಯ ಜಾಲದಿಂದ ಜನರಲ್ಲಿ ದೇಶಭಕ್ತಿ, ದೈವಭಕ್ತಿ ಕಡಿಮೆಯಾಗುತ್ತಿದೆ
ಮೈಸೂರು:ಇಂದಿನ ಆಧುನಿಕ ಜೀವನದಲ್ಲಿ ಜನರು ದೈವಭಕ್ತಿ ಹಾಗೂ ದೇಶಭಕ್ತಿಯನ್ನು ಮರೆಯುತ್ತಿದ್ದಾರೆ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಶ್ರೀಕೃಷ್ಣಮಿತ್ರ ಮಂಡಳಿಯ ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಹುತೇಕರು ಆರ್ಥಿಕತೆಯ ಹಿಂದೆ ಓಡುತ್ತಿದ್ದು, ದುಂದು ವೆಚ್ಚ, ಅನಗತ್ಯ ಖರ್ಚು ಮಾಡುವುದು ಹೆಚ್ಚಾಗುತ್ತಿದೆ. ಇದರಿಂದ ದೇಶಭಕ್ತಿ, ದೈವಭಕ್ತಿ ಕಡಿಮೆಯಾಗುತ್ತಿದೆ. ಅನಗತ್ಯ ಖರ್ಚು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ವಿದೇಶ ಪ್ರಯಾಣ ಹಾಗೂ ಚಿನ್ನ ಖರೀದಿಯನ್ನು ಮುಂದೂಡಬೇಕು ಎಂದು ದೇಶದ ಜನರಿಗೆ ಕರೆ ನೀಡಿದ್ದು, ಅವರ ಮಾತನ್ನು ಪಾಲಿಸಬೇಕು. ದೇಶದ ಏಳಿಗೆಗಾಗಿ ದುಡಿಯಬೇಕು ಎಂದರು.
ಸನಾತನ ಹಿಂದೂ ಧರ್ಮದ ಪ್ರಚಾರ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀಕೃಷ್ಣ ಮಿತ್ರ ಮಂಡಳಿ, ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಂತಸವಾಗಿದೆ. ಮಂಡಳಿಯು ಧರ್ಮ ಸಂರಕ್ಷಣೆಗೆ ಮೈಯೊಡ್ಡಿ ನಿಂತಿದ್ದು, ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸ್ಫೂರ್ತಿಯಲ್ಲಿ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಕೃಷ್ಣನಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತುವ ಆಕರ್ಷಣ ಶಕ್ತಿಯಿತ್ತು. ಕೃಷ್ಣನನ್ನು ನೆನೆಯುತ್ತಲೇ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕು. ಸಹಕಾರ ತತ್ವದಲ್ಲಿ ಅಭಿವೃದ್ಧಿ ಸಾಧಿಸಬೇಕು. ಅದೇ ಮಾದರಿಯಲ್ಲಿ ಶ್ರೀಕೃಷ್ಣ ಮಿತ್ರ ಮಂಡಳಿ ನಡೆದು ಬರುತ್ತಿದೆ ಎಂದು ಶ್ಲಾಘಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಧರ್ಮವನ್ನು ಒಡೆಯಲು ಕೆಲ ದುಷ್ಟಶಕ್ತಿಗಳು ಮೊದಲಿನಿಂದಲೂ ಗದಾಪ್ರಹಾರ ನಡೆಸಿವೆ. ತಿರುಪತಿ, ಶಬರಿಮಲೆ, ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ಅಪಚಾರ ಮಾಡಿವೆ. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಜನಿವಾರ ತೆಗೆಸಲಾಗಿದೆ. ಸನಾತನ ಧರ್ಮದ ಮೇಲಿನ ನಂಬಿಕೆಗಳ ಮೇಲೆ ಗದಾಪ್ರಹಾರವಿದು. ಧರ್ಮವನ್ನು ಉಳಿವಿಗೆ ಒಂದಾಗಬೇಕು ಎಂದು ಮನವಿ ಮಾಡಿದರು.
ಹಿರಿಯ ಪತ್ರಕರ್ತ ರವೀಂದ್ರ ಜೋಶಿ ಅವರಿಗೆ ಶ್ರೀಕೃಷ್ಣಧಾಮ, ಶ್ರೀಕೃಷ್ಣಮಿತ್ರಮಂಡಳಿಯಿಂದ ‘ಶ್ರೀಕೃಷ್ಣಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಂಡಳಿಯ ಅಧ್ಯಕ್ಷ ಎನ್.ಗೋಪಾಲಕೃಷ್ಣನ್, ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ.ಎಸ್.ಶೇಖರ್, ಸದಸ್ಯರಾದ ಪಿ.ಜಯರಾಮ್ ಭಟ್, ಕೆ.ವಿ.ಶ್ರೀಧರ, ಟಿ.ಜಿ.ಗುರುಪ್ರಸಾದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net