ಈ ವೇಳೆ ಶ್ರೀರಂಗಪಟ್ಟಣ ಹನುಮ ಮಾಲಾಧಾರಿಗಳ ಸಮಿತಿಯ ವಿಭಾಗೀಯ ಸಂಚಾಲಕ ಲೋಹಿತ್ ಅರಸ್ ಮಾತನಾಡಿ, ದೇವಸ್ಥಾನದ 20 ಮೀಟರ್ ದೂರದಲ್ಲಿಯೇ ಭೂಮಿ ಅಗೆಯುತ್ತಿರುವುದರಿಂದ ರಾಜಗೋಪುರಕ್ಕೆ ಹಾನಿಯಾಗುತ್ತದೆ. ಜನರ ವಿರೋಧದ ನಡುವೆಯೂ 200 ವರ್ಷ ಹಳೆಯ ಪುರಾತನ ಕಲ್ಲು, ಮಣ್ಣನ್ನು ತೆಗೆದಿದ್ದಾರೆ. ಇದರಿಂದ ರಾಜಗೋಪುರಕ್ಕೆ ಹಾನಿಯಾಗುತ್ತದೆ ಎಂದು ಗ್ರಾಮಸ್ಥರು ಹೇಳಿದರೂ ಜಿಲ್ಲಾಡಳಿತ, ಪ್ರಾಧಿಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.