ಸರ್ಕಾರದ ಅನುದಾನದಲ್ಲಿ ಕೆಫೆ: ಅಕ್ಕ ಕೆಫೆ ಸ್ಥಾಪನೆಗೆ ಆಯ್ಕೆಯಾಗುವ ಸ್ಥಳ ಹಾಗೂ ಸ್ವಸಹಾಯ ಸಂಘಗಳ ನಡುವೆ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳುತ್ತದೆ. ಸರ್ಕಾರದ ಅನುದಾನದಲ್ಲೇ ಸಂಪೂರ್ಣ ಮೂಲಸೌಕರ್ಯವನ್ನು ಒದಗಿಸಲಾಗುತ್ತದೆ. ಪ್ರೀಮಿಯಂ ರೆಸ್ಟೋರೆಂಟ್‌ಗೆ ಸರ್ಕಾರ 15 ಲಕ್ಷ ರೂ, ಕ್ಲಾಸಿಕ್ ಕಿರು ಅಕ್ಕ ಕೆಫೆಗೆ 7 ಲಕ್ಷ ರೂ. ನೀಡಲಿದೆ. ಕೆಫೆಯ ನವೀಕರಣ, ನೆಲಹಾಸು, ಗೋಡೆಗಳು ಮತ್ತು ಛಾವಣಿ, ಶೇಖರಣಾ ಕ್ಯಾಬಿನೆಟ್‌ಗಳು, ಕೊಳಾಯಿ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ರಶೀದಿಯಂತ್ರ ಖರೀದಿ, ಪೀಠೋಪಕರಣಗಳು, ಬ್ರಾೃಂಡಿಂಗ್ ವ್ಯವಸ್ಥೆಗೆ ಸರ್ಕಾರ ಅನುದಾನ ನೀಡಲಿದೆ. ಕೆಫೆಗೆ ಬೇಕಾದ ವಸ್ತುಗಳಾದ ಪಾತ್ರೆಗಳು, ಓವನ್ಸ್, ಗ್ಯಾಸ್ ಸಿಲಿಂಡರ್, ಸ್ಟೌವ್, ಮಿಕ್ಸಿ, ಗ್ರೈಂಡರ್, ರೆಫ್ರಿಜರೇಟರ್‌ಗಳನ್ನು ಸ್ವ ಸಹಾಯ ಸಂಘದ ಸದಸ್ಯರು ಖರೀದಿಸಬೇಕು.