ಜಮೀನು ಕಳೆದುಕೊಂಡವರಿಗೆ ಉದ್ಯೋಗ ನೀಡಿ

On Monday, the All India Farmers and Agricultural Workers Organization staged a protest demanding employment for farming families who lost their land during the land acquisition process. Leaders including H. M. Basavaraja, Bokkalli Nanjundaswamy, Rajesh, Rajanna, Praveen, Mahadevaswamy, Nagendra, and Nagamma were present.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಂಡ ರೈತ ಕುಟುಂಬಗಳಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮುಖಂಡರಾದ ಎಚ್.ಎಂ.ಬಸವರಾಜ, ಬೊಕ್ಕಳ್ಳಿ ನಂಜುಂಡಸ್ವಾಮಿ, ರಾಜೇಶ್, ರಾಜಣ್ಣ, ಪ್ರವೀಣ್, ಮಹದೇವಸ್ವಾಮಿ, ನಾಗೇಂದ್ರ, ನಾಗಮ್ಮ ಇತರರು ಇದ್ದರು.
Published on: 

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಂಡ ರೈತ ಕುಟುಂಬಗಳಿಗೆ ತಕ್ಷಣವೇ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಸೋಮವಾರ ಜಿಲ್ಲಾ ಕೈಗಾರಿಕಾ ಕೇಂದ್ರದ ಬಳಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಮಟ್ಟದ ಸಮಿತಿಯ ತೀರ್ಮಾನದಂತೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಸಂತ್ರಸ್ತ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿ ಸಂಬಂಧಿತ ಕಂಪನಿಗಳಿಗೆ ಪತ್ರ ಕಳುಹಿಸಲಾಗಿತ್ತು. ಶಿಫಾರಸಿನಂತೆ ಶೇಷಾದ್ರಿಪುರಂ ಕಾಲೇಜಿಗೆ 3 ಅಭ್ಯರ್ಥಿಗಳು, ಐಟಿಸಿಗೆ 8 ಅಭ್ಯರ್ಥಿಗಳು, ಆಟೋಲೀವ್‌ಗೆ ಒಬ್ಬ ಅಭ್ಯರ್ಥಿ, ಸಿರಿನ್‌ಗೆ 4 ಅಭ್ಯರ್ಥಿಗಳು ಸೇರಿದಂತೆ ಒಟ್ಟು 16 ಅಭ್ಯರ್ಥಿಗಳಿಗೆ ಉದ್ಯೋಗ ನೀಡುವಂತೆ ಕೆಐಎಡಿಬಿ ಪತ್ರ ನೀಡಿ ಸುಮಾರು 5 ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೂ ಒಬ್ಬ ಅಭ್ಯರ್ಥಿಗೂ ಕೆಲಸ ನೀಡಿಲ್ಲ. ಇದು ಜಿಲ್ಲಾ ಮಟ್ಟದ ಸಮಿತಿ ತೀರ್ಮಾನಕ್ಕೆ ಮತ್ತು ಭೂಮಿ ಕಳೆದುಕೊಂಡ ರೈತರಿಗೆ ನೀಡಿದ ಭರವಸೆಗೆ ವಿರುದ್ಧವಾಗಿದೆ. ಇದರಿಂದ ಸಂತ್ರಸ್ತ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ ಎಂದರು.

ಆ.10 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಂಪನಿಗಳೊಂದಿಗೆ ಸಭೆ ನಿಗದಿಪಡಿಸಲಾಗಿತ್ತು. ಆದರೆ, ಅದೇ ದಿನ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ರಾಜ್ಯವ್ಯಾಪಿ ರೈತ ಸಂಘಟನೆಗಳ ಪ್ರತಿಭಟನೆ ಮುಂಚಿತ ವಾಗಿಯೇ ನಿಗದಿಯಾಗಿದ್ದರಿಂದ, ರೈತ ಸಂಘಟನೆಯ ಪ್ರತಿನಿಧಿಗಳಿಗೆ ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲರಿಗೂ ಅನುಕೂಲವಾಗುವಂತೆ ಸಭೆಯ ದಿನಾಂಕ ಮರುನಿಗದಿಪಡಿಸಬೇಕು. ಅಲ್ಲದೆ, ಸಭೆಗೆ ಸಂಬಂಧಿಸಿದ ಎಲ್ಲಾ ಕಂಪನಿಗಳ ಮ್ಯಾನೇಜ್‌ಮೆಂಟ್‌ನ ಜವಾಬ್ದಾರಿಯುತ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಬೇಕು. ಅವರ ಸಮ್ಮುಖದಲ್ಲೇ ಉದ್ಯೋಗ ನೀಡುವ ಕುರಿತು ಸ್ಪಷ್ಟ ಹಾಗೂ ಕಾಲಮಿತಿಯ ನಿರ್ಧಾರ ಕೈಗೊಳ್ಳಬೇಕೆಂದು ಅಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಎಂ.ಬಸವರಾಜ, ಮುಖಂಡರಾದ ಬೊಕ್ಕಳ್ಳಿ ನಂಜುಂಡಸ್ವಾಮಿ, ರಾಜೇಶ್, ರಾಜಣ್ಣ, ಪ್ರವೀಣ್, ಮಹದೇವಸ್ವಾಮಿ, ನಾಗೇಂದ್ರ, ನಾಗಮ್ಮ ಇದ್ದರು.