ಶ್ರೀ ಕುದೇರು ಮಠದ ಆಸ್ತಿಯ ಇ ಖಾತೆಗೆ 2 ಲಕ್ಷ ರೂ. ಲಂಚ ಕೇಳಿ ಅಧಿಕಾರಿಗಳು..!

ಮೈಸೂರು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ನಗರದ ಶ್ರೀ ಶಿವಕುಮಾರ ಸ್ವಾಮೀಜಿ ಫಂಕ್ಷನ್ ಹಾಲ್ನಲ್ಲಿ ಮಂಗಳವಾರ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನೆ ಸವಾಲುಗಳು ಮತ್ತು ಸಂಕಲ್ಪ ಕಾರ್ಯಾಗಾರವನ್ನು  ಶ್ರೀ ಕುದೇರು ಮಠದ ಗುರುಶಾಂತ ಸ್ವಾಮಿಜಿ ಉದ್ಘಾಟಿಸಿದರು. ಕ್ಷ ಡಾ. ರಾಜೇಶ್ ಶುಕ್ಲಾ, ಪ್ರಭಾಕರ್, ದಯಾನಂದ, ಎಚ್. ಗುರುಸ್ವಾಮಿ, ದೇವರಾಜಪ್ಪ ಹಾಗೂ ಇತರರು ಇದ್ದರು.
ಮೈಸೂರು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ನಗರದ ಶ್ರೀ ಶಿವಕುಮಾರ ಸ್ವಾಮೀಜಿ ಫಂಕ್ಷನ್ ಹಾಲ್ನಲ್ಲಿ ಮಂಗಳವಾರ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನೆ ಸವಾಲುಗಳು ಮತ್ತು ಸಂಕಲ್ಪ ಕಾರ್ಯಾಗಾರವನ್ನು ಶ್ರೀ ಕುದೇರು ಮಠದ ಗುರುಶಾಂತ ಸ್ವಾಮಿಜಿ ಉದ್ಘಾಟಿಸಿದರು. ಕ್ಷ ಡಾ. ರಾಜೇಶ್ ಶುಕ್ಲಾ, ಪ್ರಭಾಕರ್, ದಯಾನಂದ, ಎಚ್. ಗುರುಸ್ವಾಮಿ, ದೇವರಾಜಪ್ಪ ಹಾಗೂ ಇತರರು ಇದ್ದರು.
Published on
ಮೈಸೂರು: ಶ್ರೀ ಕುದೇರು ಮಠದ ಆಸ್ತಿಯ ಇ ಖಾತೆ ಮಾಡಿಕೊಡಲು ಅಧಿಕಾರಿಗಳು 2 ಲಕ್ಷ ರೂ. ಲಂಚ ಕೇಳಿದರು ಎಂದು ಶ್ರೀ ಕುದೇರು ಮಠದ ಗುರುಶಾಂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ವತಿಯಿಂದ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ನಗರದ ಶ್ರೀ ಶಿವಕುಮಾರ ಸ್ವಾಮೀಜಿ ಫಂಕ್ಷನ್ ಹಾಲ್ನಲ್ಲಿ ಮಂಗಳವಾರ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನೆ ಸವಾಲುಗಳು ಮತ್ತು ಸಂಕಲ್ಪ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಠದ ಆಸ್ತಿಯನ್ನು ಇ ಖಾತೆ ಮಾಡಲು 2 ಲಕ್ಷ ರೂ. ನೀಡಬೇಕು ಎಂದು ಕೇಳಿದರು, ಅದಕ್ಕೆ ಇ ಖಾತೆಯನ್ನೇ ಮಾಡಿಸಲಿಲ್ಲ. ಮಠದ ಆಸ್ತಿ ಮಾರುವುದಿಲ್ಲವಾದ್ದರಿಂದ ನಮಗೆ ಇ ಖಾತೆ ಅವಶ್ಯಕತೆ ಇಲ್ಲ. ಅಧಿಕಾರಿಗಳು ಕೇಳಿದಷ್ಟು ಹಣ ನೀಡಿ ಇ ಖಾತೆ ಮಾಡಿಸಲು ನಮ್ಮ ಬಳಿ ಹಣ ಇಲ್ಲ. ಇಂತಹ ಭ್ರಷ್ಟರು ಇರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತದಾರರು ಮನಸ್ಸು ಮಾಡಿದರೆ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ. ಮತದಾರರ ಸಂಕಲ್ಪ ಆಗಬೇಕು. ಅಣ್ಣ ಹಜಾರೆ ಅವರಂತಹ ಸಂಕಲ್ಪ ಎಲ್ಲರಲ್ಲೂ ಬರಬೇಕು. ನಿಮ್ಮ ಮೇಲೆ ಆ ನಂಬಿಕೆ ಇದೆ. ಹನಿ ಹನಿಗೂಡಿದರೆ ಹಳ್ಳ, ತೆನೆ ತೆನೆಗೂಡಿದರೆ ಬಳ್ಳ. ಹಾಗೆ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.
ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜೇಶ್ ಶುಕ್ಲಾ ಮಾತನಾಡಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವೇ ನಮ್ಮ ಸಂಕಲ್ಪವಾಗಿ, ಆ ಮೂಲಕ ನಾವು ಈ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕಿದೆ ಎಂದರು.
ಈ ಸಮಾಜದಲ್ಲಿನ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಮ್ಮ ಗುರಿಯಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜವೇ ನಾವು ಈ ಸಮಾಜಕ್ಕೆ , ಮುಂದಿನ ಪೀಳಿಗೆಗೆ ನೀಡುವ ಕೊಡುಗೆಯಾಗಿದೆ. ಸಂಘದ ಪ್ರತಿಯೊಬ್ಬ ಸದಸ್ಯರು ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಮಾತ್ರವಲ್ಲ, ಈ ನಿಟ್ಟಿನಲ್ಲಿ ಯುವ ಸಮುದಾಯವನ್ನು ಅಣಿಗೊಳಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ದಯಾನಂದ, ಜಿಲ್ಲಾಧ್ಯಕ್ಷ ಎಚ್. ಗುರುಸ್ವಾಮಿ, ಮೈಸೂರು ವಿಭಾಗದ ಅಧ್ಯಕ್ಷ ದೇವರಾಜಪ್ಪ, ನಿವೃತ್ತ ನ್ಯಾಯಾಧೀಶರಾದ ನಾಗೇಶ್, ಪಾಂಡಿಚೇರಿಯ ಓಂಪ್ರಕಾಶ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net