ದೇವರಿಗೆ ನೈಜ ಭಕ್ತಿ ಸಮರ್ಪಿಸಿ

ತಿ.ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಹುಚ್ಚಮ್ಮತಾಯಿ ನೂತನ ದೇವಾಲಯ ಉದ್ಘಾಟನೆ ಸಮಾರಂಭದಲ್ಲಿ ವಾಟಾಳ್ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಆರ್.ಚಲುವರಾಜು, ಜೆ. ಚಂದ್ರಶೇಖರ್, ಶಿವಣ್ಣ, ಗಂಗಾಧರ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಹುಚ್ಚಮ್ಮತಾಯಿ ನೂತನ ದೇವಾಲಯ ಉದ್ಘಾಟನೆ ಸಮಾರಂಭದಲ್ಲಿ ವಾಟಾಳ್ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಆರ್.ಚಲುವರಾಜು, ಜೆ. ಚಂದ್ರಶೇಖರ್, ಶಿವಣ್ಣ, ಗಂಗಾಧರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಆರ್.ಚಲುವರಾಜು ಹೇಳಿಕೆ

ತಿ.ನರಸೀಪುರ: ಧಾರ್ಮಿಕ ಆಚರಣೆ ಮತ್ತು ದೇವರ ಆರಾಧನೆಯಲ್ಲಿ ಭಕ್ತಿಗೆ ಪ್ರಾಧಾನ್ಯಯಿದ್ದರೆ ಭಗವಂತನ ಶ್ರೀ ರಕ್ಷೆ ಪಡೆಯಲು ಸಾಧ್ಯವೆಂದು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಆರ್.ಚಲುವರಾಜು ಹೇಳಿದರು.

ತಾಲೂಕಿನ ಅತ್ತಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ಹುಚ್ಚಮ್ಮ ತಾಯಿಯ ನೂತನ ದೇವಾಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಧಾರ್ಮಿಕತೆ ಅನ್ನೋದು ಪೂಜೆಗೆ ಸೀಮಿತವಾಗದೆ. ದೇವರಿಗೆ ನೈಜ ಭಕ್ತಿಯನ್ನು ಸಮರ್ಪಣೆ ಮಾಡುವಂತಿರಬೇಕು. ಅತ್ತಹಳ್ಳಿ ಗ್ರಾಮದಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಅನುದಾನವನ್ನು ಅಪೇಕ್ಷಿಸದೆ ಶ್ರೀ ಹುಚ್ಚಮ್ಮತಾಯಿ ಟ್ರಸ್ಟ್ ರಚಿಸಿಕೊಂಡು, ಜೆ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಕ್ರೋಡೀಕರಿಸಿ, ಶಿಲೆಗಳಿಂದ ಅತ್ಯದ್ಭುತ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಟಾಳ್ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮದ ಪ.ಜಾತಿಯ ಬಂಧುಗಳು ಕುಲ ದೇವರಿಗೆ ಸುಂದರವಾದ ಗುಡಿಯನ್ನು ನಿರ್ಮಿಸುವ ಮೂಲಕ ಭಕ್ತಿ ಭಾವವನ್ನು ಮೆರೆದಿದ್ದಾರೆ. ಅತ್ತಹಳ್ಳಿ ಗ್ರಾಮಕ್ಕೂ ವಾಟಾಳ್ ಮಠಕ್ಕೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು.
ನೂತನ ದೇವಾಲಯ ಉದ್ಘಾಟನೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದಲೇ ಆಗ್ರೋದಕ, ಗೋದೇವತೆ ಸಹಿತ ಯಾಗಶಾಲೆ ಪ್ರವೇಶ ಮತ್ತು ಗಣಪತಿ ಪೂಜೆ, ಪುಣ್ಯಹನಾಂದಿ, ವಾಸ್ತು ರಕ್ಷೋಯಜ್ಞ ಪೂಜೆ, ಹೋಮ ಮತ್ತು ಕಳಸ ಪೂಜೆ ನೆರವೇರಿಸಲಾಯಿತು.
ನೂತನ ಶಿಲಾ ವಿಗ್ರಹಗಳಿಗೆ ಜಲಾಧಿವಾಸ, ಧಾನ್ಯಧಿವಾಸ, ವಿಗ್ರಹ, ಸಂಸ್ಕಾರ, ಶಯ್ಯಧಿವಾಸಗಳನ್ನು ನೆರವೇರಿಸಲಾಯಿತು. ಬುಧವಾರ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಮಹಾಗಣಪತಿ, ಶ್ರೀ ಹುಚ್ಚಮ್ಮದೇವಿ ಮತ್ತು ಶ್ರೀ ಒಳಕಲ್ಲಮ್ಮ ದೇವತೆಗಳ ಪ್ರತಿಷ್ಠಾಪನೆ, ಅಭಿಷೇಕ ಜರುಗಿದವು. ಬಳಿಕ ಪ್ರಧಾನ ಹೋಮ, ಕಲಾ ಹೋಮ, ಮಹಾಪೂರ್ಣಾಹುತಿ, ನೇತ್ರೋನ್ಮಿಲನ, ಕದಳಿವೇದ, ಬಲಿದಾನ ನಂತರ ಕುಂಕುಮಾರ್ಚನೆ, ಪುಷ್ಪಾರ್ಚನೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಸಾಂಗವಾಗಿ ನೆರವೇರಿದವು.
ಇದೇ ವೇಳೆ ಗ್ರೇಟರ್ ಬೆಂಗಳೂರು ಕೆಆರ್‌ಐಡಿಎಲ್ ಕಾರ್ಯಪಾಲಕ ಇಂಜಿನಿಯರ್ ಜೆ. ಚಂದ್ರಶೇಖರ್ ಬೇವಿನಹಳ್ಳಿ ಸೇರಿದಂತೆ ಸೇವಾ ಟ್ರಸ್ಟ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್, ಉಪ ಔಷಧ ನಿಯಂತ್ರಕ ಸುರೇಶ್ ಕೆಂಪಯ್ಯ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎ.ಸಿ. ಲಿಂಗೇಗೌಡ, ನಿವೃತ್ತ ಜನರಲ್ ಮ್ಯಾನೇಜರ್ ಕೆ.ಶಿವಸ್ವಾಮಿ, ತಾ.ಪಂ ಮಾಜಿ ಅಧ್ಯಕ್ಷ ಜೆ.ಕುಮಾರಸ್ವಾಮಿ, ನಿವೃತ್ತ ಮ್ಯಾನೇಜರ್ ಜೆ. ಸೋಮಶೇಖರ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಎ.ಎನ್. ಮಹೇಶ್, ಡಿ.ಸುನೀಲ್ ಕುಮಾರ್, ಭಾಸ್ಕರ್, ಸೇವಾ ಟ್ರಸ್ಟ್ ಅಧ್ಯಕ್ಷ ಶಿವಣ್ಣ, ಗೌರವಾಧ್ಯಕ್ಷ ಜಯಕೃಷ್ಣ, ಪ್ರಧಾನ ಕಾರ್ಯದರ್ಶಿ ಆರ್. ಡಿ.ಧರ್ಮಸೇನಾ, ಕಾರ್ಯದರ್ಶಿ ಗಂಗಾಧರ, ಉಪಾಧ್ಯಕ್ಷ ಮಹೇಶ, ಸಂಘಟನಾ ಕಾರ್ಯದರ್ಶಿ ಎ.ಎಸ್.ರವಿ, ಡಾ. ಕಾಂತರಾಜು, ಸೇರಿದಂತೆ ನಿರ್ದೇಶಕರು ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net