ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

  ಹುಣಸೂರು ತಾಲೂಕು ವಿನೋಬಾ ಕಾಲನಿಯಲ್ಲಿ ವಿಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ರಾಮಯ್ಯ, ವಿ.ಗಣೇಶ್, ಶಿವಕುಮಾರ್, ಚಿನ್ನವೀರಯ್ಯ, ಸುಧಾಕರ್, ವಿ.ಗಣೇಶ್ ಇದ್ದರು.
ಹುಣಸೂರು ತಾಲೂಕು ವಿನೋಬಾ ಕಾಲನಿಯಲ್ಲಿ ವಿಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ರಾಮಯ್ಯ, ವಿ.ಗಣೇಶ್, ಶಿವಕುಮಾರ್, ಚಿನ್ನವೀರಯ್ಯ, ಸುಧಾಕರ್, ವಿ.ಗಣೇಶ್ ಇದ್ದರು.
Published on
ಹುಣಸೂರು : ಯುವಶಕ್ತಿಯ ಸದ್ಬಳಕೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ರಾಮಯ್ಯ ಹೇಳಿದರು.
ತಾಲೂಕಿನ ರತ್ನಪುರಿಯ ವಿಎಸ್‌ಎಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಿನೋಬಾ ಕಾಲನಿ ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕನಸುಗಳನ್ನು ಹೊತ್ತು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪರಿಶ್ರಮದಿಂದ ಸಾಧನೆಗೈದು ಕಹಿ ನೆನಪುಗಳನ್ನು ಮರೆತು ಸಿಹಿ ನೆನಪುಗಳೊಂದಿಗೆ ತೆರಳಬೇಕು. ಯಶಸ್ಸು ನಿಮ್ಮ ಪರಿಶ್ರಮದ ಮೇಲೆ ನಿಂತಿರುತ್ತದೆ. ಪ್ರಯತ್ನ ಇದ್ದರೆ ಫಲವನ್ನು ಪಡೆಯಬಹುದು. ಇಂದಿನ ಯುವಕರಿಗೆ ಅವರಲ್ಲಿರುವ ಶಕ್ತಿಯ ಬಗ್ಗೆ ಅರಿವೇ ಇರುವುದಿಲ್ಲ. ಅದನ್ನು ಗುರುತಿಸುವ ಉಪನ್ಯಾಸಕರು, ಪಾಲಕರು, ಗುರು ಹಿರಿಯರ ಮಾತನ್ನು ಪಾಲಿಸಬೇಕು ಎಂದುಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕೆ.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಶಿಸ್ತಿನ ಜೀವನ ನಡೆಸಬೇಕು. ಶ್ರಮದಾನ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ರಾಷ್ಟ್ರಸೇವೆ ಮಾಡಿದಂತೆ. ಮಂದೆ ಜನಪ್ರತಿನಿಧಿಯಾಗುವ ಎಲ್ಲ ಅರ್ಹತೆಗಳು ದೊರಕಿದಂತೆ. ಪಾಲಕರು ಮಕ್ಕಳ ಸಾಮರ್ಥ್ಯ ಗುರುತಿಸಿ, ಪ್ರೋತ್ಸಾಹ ನೀಡುವ ಮೂಲಕ ಕೆಟ್ಟದಾರಿಗೆ ಹೋಗದಂತೆ ಜಾಗ್ರತೆ ವಹಿಸಬೇಕು ಎಂದರು.
ಪ್ರಾಂಶುಪಾಲ ಶಿವಕುಮಾರ್ ಮಾತನಾಡಿ, ಯುವಜನತೆ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು ಎಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳವಣಿಗೆ, ಸಾಮಾಜಿಕ ಜವಾಬ್ದಾರಿ, ವ್ಯಕ್ತಿತ್ವ ವಿಕಸನ ಸೇರಿದಂತೆ ಅನೇಕ ವಿಚಾರಗಳನ್ನು ಎನ್‌ಎಸ್‌ಎಸ್ ಶಿಬಿರದಲ್ಲಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಚಿನ್ನವೀರಯ್ಯ, ಎಪಿಎಂಸಿ ಮಾಜಿ ನಿರ್ದೇಶಕ ವಿ.ಗಣೇಶ್, ಶಿಬಿರಾಧಿಕಾರಿ ಸುಧಾಕರ್, ಉಪನ್ಯಾಸಕ ಜಯಸ್ವಾಮಿ ಮಾತನಾಡಿದರು. ಗ್ರಾಪಂ ಮಾಜಿ ಸದಸ್ಯ ಆನಂದ್ ಕುಮಾರ್, ಪಿಚ್ಚಯ್ಯ, ಟಿ.ನಾಗರಾಜು, ಮುಖ್ಯ ಶಿಕ್ಷಕ ಚಂದ್ರಶೇಖರ್, ಉಪನ್ಯಾಸಕರಾದ ಮನೋಜ್, ನಾಗೇಶ್, ಎಂ.ರವಿ. ಪ್ರಥಮ ದರ್ಜೆ ಸಹಾಯಕ ಮಲ್ಲಿಕಾರ್ಜನಸ್ವಾಮಿ, ಶಿಬಿರಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net