* ಸಮೃದ್ಧ ಆದಾಯ ನೀಡುವ ಬೆಳೆಗಳು: ಬಿ.ಜಿ.ಪ್ರಸನ್ನಕುಮಾರ್ ಅವರಿಗೆ ಇರುವ ಒಟ್ಟು 15 ಎಕರೆ ಜಮೀನೂ ಮಳೆ ಆಶ್ರಿತವಾಗಿದೆ. ಸುತ್ತಮುತ್ತ ಯಾವ ನದಿ, ಕೆರೆಗಳೂ ಇಲ್ಲ. ಬೆಳೆಗಳಿಗೆ 3 ಬೋರ್‌ವೆಲ್‌ಗಳೇ ಆಧಾರವಾಗಿವೆ. ಪ್ರಸನ್ನಕುಮಾರ್ ಅವರು 6 ಎಕರೆಯಲ್ಲಿ ತೆಂಗು 350, ಅಡಿಕೆ 700, ಮೆಣಸು 200 ಬಳ್ಳಿ, ಬಾಳೆ 1.500 ಗಿಡಗಳನ್ನು ಬೆಳೆಸಿದ್ದಾರೆ . ಇವೆಲ್ಲವೂ ಸಮೃದ್ಧ ಫಸಲು ನೀಡುತ್ತಿವೆ. ವಾರ್ಷಿಕವಾಗಿ ತೇಗ 100, ಶ್ರೀಗಂಧ 50, ಮಾಧವಿ 100, ಬೀಟೆ 50, ಸಿಲ್ವರ್ 100 ಮರಗಳನ್ನು ಬೆಳೆಸಿದ್ದಾರೆ. 20 ವರ್ಷದಿಂದಲೂ ಇವುಗಳಿಂದ ಆದಾಯ ಬರುತ್ತಿದೆ. ಒಂದೊಂದು ಮರಕ್ಕೂ ಒಂದೊಂದು ಲಕ್ಷ ರೂ. ಪಡೆಯುತ್ತಿದ್ದು, ಇವರ ಕೃಷಿ ಬದುಕು ಸಂತೃಪ್ತವಾಗಿದೆ.