ನಮ್ಮ ಕ್ಲಿನಿಕ್ ತೆರೆಯಲು ಅಗತ್ಯ ಕ್ರಮ

 ಕೆ.ಆರ್.ನಗರದ ಜಾಮೀಯ ಮಸೀದಿಯಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಜಾಮೀಯ ಮಸೀದಿ ಕಮಿಟಿ ಅಧ್ಯಕ್ಷ ಅಪ್ಸರ್‌ಬಾಬು, ಕಾರ್ಯದರ್ಶಿ ತಸ್ಸವರ್ ಪಾಷ, ಖಜಾಂಚಿ ನೇಮಿತ್ ಇನ್ನಿತರರು ಇದ್ದರು.
ಕೆ.ಆರ್.ನಗರದ ಜಾಮೀಯ ಮಸೀದಿಯಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಜಾಮೀಯ ಮಸೀದಿ ಕಮಿಟಿ ಅಧ್ಯಕ್ಷ ಅಪ್ಸರ್‌ಬಾಬು, ಕಾರ್ಯದರ್ಶಿ ತಸ್ಸವರ್ ಪಾಷ, ಖಜಾಂಚಿ ನೇಮಿತ್ ಇನ್ನಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • our clinic
ಕೆ.ಆರ್.ನಗರ: ಮುಸ್ಲಿಂ ಬಡಾವಣೆ ನಿವಾಸಿಗಳ ಬಹುದಿನಗಳ ಬೇಡಿಕೆಯಂತೆ ಶಾಸಕರೊಂದಿಗೆ ಚರ್ಚಿಸಿ ನಮ್ಮ ಕ್ಲಿನಿಕ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಜಾಮೀಯ ಮಸೀದಿಯಲ್ಲಿ ಪಟ್ಟಣದ ಮೌಲಾನಾ ಅಬುಲ್ ಕಲಂ ಆಜಾದ್ ಸೇವಾ ಟ್ರಸ್ಟ್ ಜಾಮೀಯ ಮಸೀದಿ ಕಮಿಟಿ ಹಾಗೂ ಕೆ.ಆರ್.ನಗರ ಮುಸ್ಲಿಂ ಸಮುದಾಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ, ಮುಸ್ಲಿಂ ಬಡಾವಣೆಯಲ್ಲಿ ನಾಲ್ಕು ವಾರ್ಡ್‌ಗಳಿದ್ದು, ನಮ್ಮ ಕ್ಲಿನಿಕ್ ತೆರೆಯುವುದರಿಂದ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದರು.
ನಾನು ಮತ್ತು ಶಾಸಕ ಡಿ.ರವಿಶಂಕರ್ ಸೇರಿದಂತೆ ನಮ್ಮ ಕುಟುಂಬ ಹಿಂದಿನಿಂದಲೂ ಮುಸ್ಲಿಂ ಸಮುದಾಯದ ಕಷ್ಟ-ಸುಖಗಳಲ್ಲಿ ಸದಾ ಭಾಗಿಯಾಗುತ್ತಿದ್ದೇವೆ. ಮುಸ್ಲಿಂ ಸಮುದಾಯದವರು ನಮ್ಮ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದಾರೆ. ಅದಕ್ಕಾಗಿ ಸಮುದಾಯದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಾಮೀಯ ಮಸೀದಿ ಕಮಿಟಿ ಸೇರಿದಂತೆ ಇತರ ಮುಸ್ಲಿಂ ಸಮುದಾಯದ ಸಂಘಟನೆಗಳ ವತಿಯಿಂದ ದೊಡ್ಡಸ್ವಾಮೇಗೌಡರನ್ನು ಸನ್ಮಾನಿಸಲಾಯಿತು.
ಜಾಮೀಯ ಮಸೀದಿ ಕಮಿಟಿ ಅಧ್ಯಕ್ಷ ಅಪ್ಸರ್‌ಬಾಬು, ಕಾರ್ಯದರ್ಶಿ ತಸ್ಸವರ್ ಪಾಷ, ಖಜಾಂಚಿ ನೇಮಿತ್, ಪದಾಧಿಕಾರಿಗಳಾದ ಇಕ್ಬಾಲ್ ಪಾಷ, ನವೀದ್, ಸೈಯದ್ ಶಾಕೀರ್, ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಕುರುಬರ ಸಂಘದ ನಿರ್ದೇಶಕ ಅಪ್ಪಾಜಿಗೌಡ, ಮುಖಂಡರು ಮತ್ತು ಮಸೀದಿಯ ಧರ್ಮಗುರುಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net