ಮೈಸೂರಿನಲ್ಲಿ ಎನ್‌ಸಿಸಿ ಅಕಾಡೆಮಿ ಸ್ಥಾಪನೆ: ಸಂಸದ ಯದುವೀರ್ ಮಾಹಿತಿ

 ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಎನ್‌ಸಿಸಿ 77ನೇ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು. ಡಾ.ಅನಿಲ್ ಥಾಮಸ್ ಇನ್ನಿತರರಿದ್ದರು.
ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಎನ್‌ಸಿಸಿ 77ನೇ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು. ಡಾ.ಅನಿಲ್ ಥಾಮಸ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 77ನೇ ಎನ್‌ಸಿಸಿ ಡೇ ಕಾರ್ಯಕ್ರಮ
  • ಮೈಸೂರಿನಲ್ಲಿ ಎನ್‌ಸಿಸಿ ಸೈಬರ್ ಕೆಡೆಟ್ ಕಾರ್ಪ್ಸ್ ರಚನೆ ಮಾಡುವ ಚಿಂತನೆ
  • ಎನ್‌ಸಿಸಿ ವಿದ್ಯಾರ್ಥಿಗಳು ರಕ್ಷಣಾ ಕ್ಷೇತ್ರದ ಬಗ್ಗೆ ತರಬೇತಿ
  • ಯುವ ಜನರು ಹೆಚ್ಚಿನ ಪ್ರಮಾಣದಲ್ಲಿ ಎನ್‌ಸಿಸಿ ಸೇರ್ಪಡೆಯಾಗಿ ದೇಶ ಸೇವೆ ಮಾಡಲು ಸಜ್ಜಾಗಬೇಕು
ಮೈಸೂರು: ನಗರದ ಹೊರವಲಯದಲ್ಲಿರುವ ಆಲನಹಳ್ಳಿಯಲ್ಲಿ ಎನ್‌ಸಿಸಿ(ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್) ಅಕಾಡೆಮಿಗಾಗಿ ಜಾಗವನ್ನು ಮೀಸಲಿಡಲಾಗಿದೆ. ಶೀಘ್ರದಲ್ಲೇ ಅಕಾಡೆಮಿ ಸ್ಥಾಪನೆಯಾಗುವ ವಿಶ್ವಾಸ ಇದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ 77ನೇ ಎನ್‌ಸಿಸಿ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ ಎನ್‌ಸಿಸಿ ಸೈಬರ್ ಕೆಡೆಟ್ ಕಾರ್ಪ್ಸ್ ರಚನೆ ಮಾಡುವ ಚಿಂತನೆ ಇದೆ. ಇದು ಭಾರತದ ಸೈಬರ್ ರಕ್ಷಣೆಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಅತಿದೊಡ್ಡ ಸಂಘಟನೆಯಾಗಿರುವ ಎನ್‌ಸಿಸಿ ಯುವಕರಲ್ಲಿ ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುತ್ತಿದೆ ಎಂದರು.
ಎನ್‌ಸಿಸಿ ಮೂಲಕ ಯುವಕರು ಶೈಕ್ಷಣಿಕ, ಮಿಲಿಟರಿ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡುತ್ತದೆ. ಇದು ಭಾರತೀಯ ಸೇನೆಗೆ ಸೇರಲು ವಿಶೇಷ ಪ್ರವೇಶ ಮಾರ್ಗವನ್ನೂ ಒದಗಿಸುತ್ತದೆ ಎಂದರು.
ಎನ್‌ಸಿಸಿ ವಿದ್ಯಾರ್ಥಿಗಳು ರಕ್ಷಣಾ ಕ್ಷೇತ್ರದ ಬಗ್ಗೆ ತರಬೇತಿ ದೊರೆಯುತ್ತದೆ. ಇದರಿಂದ ರಕ್ಷಣಾ ಇಲಾಖೆಗೆ ಎನ್‌ಸಿಸಿ ಪೂರಕವಾಗಿದೆ ಆದ್ದರಿಂದ ಯುವ ಜನರು ಹೆಚ್ಚಿನ ಪ್ರಮಾಣದಲ್ಲಿ ಎನ್‌ಸಿಸಿ ಸೇರ್ಪಡೆಯಾಗಿ ದೇಶ ಸೇವೆ ಮಾಡಲು ಸಜ್ಜಾಗಬೇಕು ಎಂದರು.
ನೌಕಾದಳದ ಕರ್ನಾಟಕ ಕಮಾಡಿಂಗ್ ಆಫೀಸರ್ ಲೆಫ್ಟಿನೆಂಟ್ ಕಮಾಂಡರ್ ವಿನಯ್ ರಾಮಚಂದ್ರನ್, ಆಲುಮ್ನಿ-4 ನ ಕಾರ್ ಏರ್ ಸ್ಕ್ವಾರ್ಡನ್ ಎನ್‌ಸಿಸಿಯ ಅಧ್ಯಕ್ಷ ಡಾ.ಅನಿಲ್ ಥಾಮಸ್, ಕಾರ್ಯದರ್ಶಿ ಉಮಾ ವೆಂಕಟೇಶ್, ಸಂಘಟನಾ ಸಮಿತಿ ಮುಖ್ಯಸ್ಥ ಪಾಂಡುರಂಗ ರಾವ್, ಕ್ಯಾಪ್ಟನ್ ಸಿ.ಟಿ.ಸುಪ್ರೀತಾ, ಆಫರ್ ಮೊಹಿತ್, ಎಂ.ಪಿ.ಶ್ಯಾಮಲಾ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net