ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹುಣಸೂರು ನಗರದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಕಾಂತರಾಜು, ಗಣೇಶ್ ಕುಮಾರಸ್ವಾಮಿ, ವೆಂಕಟಮ್ಮ, ಹನಗೋಡು ಮಂಜುನಾಥ್, ಸುರೇಶ್ ಇತರರಿದ್ದರು.
Published on:
Copied
Follow Us
ಹುಣಸೂರು: ವಿಕಸಿತ ಭಾರತದ ಕನಸನ್ನು ಹೊತ್ತು ದೇಶಕ್ಕಾಗಿ 12 ವರ್ಷಗಳಿಂದ ಸತತವಾಗಿ ಸೇವಕನಾಗಿ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಈ ಶತಮಾನದ ಅಧ್ಬುತ ವ್ಯಕ್ತಿತ್ವ ಹೊಂದಿದವರು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು ಅಭಿಪ್ರಾಯಪಟ್ಟರು.
ಮೋದಿ ಅವರು ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿ 12 ವರ್ಷಗಳು ಸಂದ ಸಂದರ್ಭದಲ್ಲಿ ಗುರುವಾರ ತಾಲೂಕು ಬಿಜೆಪಿ ಘಟಕದ ವತಿಯಿಂದ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗಿಡನೆಟ್ಟು ನಂತರ ಮಾತನಾಡಿದ ಅವರು, 13 ವರ್ಷಗಳವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ, 12 ವರ್ಷಗಳಿಂದ ದೇಶದ ನೇತಾರರಾಗಿ ಚುಕ್ಕಾಣಿ ಹಿಡಿದು ಒಂದು ದಿನವೂ ರಜೆಯನ್ನು ತೆಗೆದುಕೊಳ್ಳದೆ ದಿನ 20 ಗಂಟೆ ದೇಶ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಮೋದಿ ಅವರು ವಿಶ್ವನಾಯಕರೂ ಹೌದು. ಶತಮಾನದ ಅಧ್ಬುತ ವ್ಯಕ್ತಿ ಎಂದು ಬಣ್ಣಿಸಿದರು.
ಹೊರಹೊಮ್ಮಬೇಕೆನ್ನುವ ಅದಮ್ಯ ಆಸೆಯೊಂದಿಗೆ ಎಲ್ಲ ರಂಗಗಳಲ್ಲು ದೇಶವನ್ನು ವಿಶ್ವದ ಪ್ರಥಮ ಸ್ಥಾನದಲ್ಲಿ ನಿಲ್ಲಿಸಲು ಮೋದಿ ಹೊರಟಿದ್ದಾರೆ. ಅದಕ್ಕೆ ಬೇಕಾದ ರಂಗಸಜ್ಜಿಕೆಯೂ ನಡೆಯುತ್ತಿದೆ. ರೈತರು, ಕೃಷಿಕರು, ಕೈಗಾರಿಕೆ, ಉದ್ಯಮ, ಆಧುನಿಕ ತಂತ್ರಜ್ಞಾನ, ಮಂಗಳನ ಅಂಗಳ ಹೀಗೆ ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಅನನ್ಯ. ದೇಶದ ಪ್ರತಿಯೊಂದು ಕುಟುಂಬವೂ ಕೇಂದ್ರ ಸರ್ಕಾರದ ಒಂದಿಲ್ಲೊಂದು ಯೋಜನೆಯ ಫಲಾನುಭವಿಗಳಾಗಿರುತ್ತಾರೆ ಎನ್ನುವುದೇ ಅವರ ಆಡಳಿತದ ವಿಶೇಷ. 4399 ದಿನಗಳ ನಿರಂತರ ದುಡಿಮೆಯ ನಂತರವೂ ಇನ್ನೂ ಅವರ ದೇಶ ಸೇವೆ ಮುಂದುವರಿಯಲಿದೆ. ದೇಶಕ್ಕೆ ಅವರು ಅಗತ್ಯವಾಗಿ ಬೇಕಾಗಿದ್ದಾರೆ ಎಂದರು.
ಪಕ್ಷದ ನಗರಾಧ್ಯಕ್ಷ ಟಿ.ಡಿ.ನಾರಾಯಣ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್, ನಟರಾಜ್ ನಾಯಕ, ರೈತ ಮೋರ್ಚಾ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಹನಗೋಡು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷೆ ವೆಂಕಟಮ್ಮ, ಯಶೋದಮ್ಮ, ರವಿಶಂಕರ್, ಅರುಣ್ ಚವ್ಹಾಣ್ ಇತರರು ಇದ್ದರು.