ನಗರದ ತಾಲೂಕು ಕ್ರೀಡಾಂಗಣದಲ್ಲಿ ಪುರುಷರು ಮಹಿಳೆಯರ ಎರಡು ದಿನಗಳ ಕುಸ್ತಿ ಪಂದ್ಯಾವಳಿಯನ್ನು ಶಾಸಕ ದರ್ಶನ್ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ, ರ‌್ಯಾಂಬೊ ಕಿರಣ್, ತೊರೆಮಾವು ಗಿರೀಶ್ ಸೇರಿದಂತೆ ಇತರರು ಇದ್ದರು.
ನಂಜನಗೂಡು : ನಂಜನಗೂಡು ಹಲವು ಕ್ರೀಡೆಗಳ ಜತೆಗೆ ಕುಸ್ತಿ ಪಂದ್ಯಾವಳಿಗಳಿಗೆ ಹೆಸರುವಾಸಿಯಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಪುರುಷರು ಮತ್ತು ಮಹಿಳೆಯರ ಹೊನಲು-ಬೆಳಕಿನ ಎರಡು ದಿನಗಳ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.ನಗರದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡುವಂತೆ ಎರಡು ವರ್ಷಗಳಿಂದ ಹೇಳುತ್ತಿದ್ದರು. ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಅನುಕೂಲವಾಗಿದೆ. ನಾನು ಕೂಡ ಕ್ರೀಡಾಭಿಮಾನಿಯಾಗಿ ಪ್ರೋತ್ಸಾಹ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಕ್ರೀಡೆಗಳನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಉರಿಲಿಂಗ ಪೆದ್ದಿ ಮಠದ ಪೀಠಾಧ್ಯಕ್ಷ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಕುಸ್ತಿ ಪಂದ್ಯಾವಳಿ ಒಂದು ಜನಪದ ಶೈಲಿ ಕ್ರೀಡೆಯಾಗಿದೆ. ಇಂತಹ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಸಹಕಾರಿಯಾಗಿದೆ. ಪ್ರತಿವರ್ಷ ಇಂತಹ ಕ್ರೀಡೆಗಳು ನಡೆಯಬೇಕು. ದಿ. ಧ್ರುವನಾರಾಯಣ್ ಅವರಂತೆ ದರ್ಶನ್ ಕೂಡ ಇಂತಹ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಮೈಸೂರಿನ ಮಾಜಿ ಮಹಾಪೌರ ಪುರುಷೋತ್ತಮ್, ಕಳಲೆ ಕೇಶವಮೂರ್ತಿ, ರ‌್ಯಾಂಬೊ ಕಿರಣ್, ತೊರೆಮಾವು ಗಿರೀಶ್, ಸುಂದರ್ ರಾಜ್, ರಾಜೇಶ್, ಪರಮೇಶ್, ಈಶ್ವರ್,ಕೃಷ್ಣಪ್ಪ, ಗಿರೀಶ್ ಹಾಜರಿದ್ದರು.