ಗಾಂಧಿನಗರ ನಿವಾಸಿ ಸಿ.ಆರ್. ಮಂಜುನಾಥ, ಸಹೋದರ ಶರತ್ ಎಂಬವರಿಗೆ ಸೇರಿದ ಬೈಕ್‌ಗಳು ಬೆಂಕಿಗೆ ಆಹುತಿಯಾಗಿದೆ. ಮಂಜುನಾಥ ಅವರಿಗೆ ಸೇರಿದ ಬೈಕ್ ರಾಜ್ ಕುಮಾರ್ ರಸ್ತೆಯ ಟೀಚರ್ಸ್ ಬಡಾವಣೆಯಲ್ಲಿ ನಿಲ್ಲಿಸಿದ್ದ ಸಂದರ್ಭ ಇತ್ತೀಚೆಗೆ ಅಕಾಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶೋರೂಂನವರು ಮಂಜುನಾಥನಿಗೆ 16-4-2026 ರಂದು ಹೊಸ ಬೈಕ್ ನೀಡಿದ್ದರು. ಈ ಬೈಕ್‌ಗೆ ಇನ್ನೂ ನಂಬರ್ ನೋಂದಣಿ ಆಗಿರಲಿಲ್ಲ. ಮಂಜುನಾಥ ಅವರ ಹೊಸ ಬೈಕ್‌ನ ಬಳಿಯಲ್ಲಿಯೇ ಸಹೋದ ಶರತ್ ಕೂಡ ಬೈಕ್ ನಿಲ್ಲಿಸಿದ್ದರು. ಮಧ್ಯರಾತ್ರಿ 1.08 ಗಂಟೆಗೆ ವ್ಯಕ್ತಿಯೊಬ್ಬ ಗುರುತು ಪತ್ತೆಯಾಗಬಾರದು ಎಂಬ ಉದ್ದೇಶಕ್ಕೆ ಹೆಲ್ಮೇಟ್ ಧರಿಸಿ ಪೆಟ್ರೋಲ್ ಸುರಿದು ಬೈಕ್‌ಗಳಿಗೆ ಬೆಂಕಿ ಹಚ್ಚಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.