ಮೈಸೂರು: ಕದಂಬ ರಂಗ ವೇದಿಕೆ ವತಿಯಿಂದ ನ.7, 8 ಮತ್ತು 9ರಂದು ಕಲಾ ಮಂದಿರದ ಕಿರು ರಂಗಮಂದಿರದಲ್ಲಿ ಕದಂಬ ರಂಗೋತ್ಸವ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.
ನ.7ರಂದು ಸಂಜೆ 6.30ಕ್ಕೆ ಹಿರಿಯ ನಟ ಶಂಕರ್ ಅಶ್ವತ್ಥ್ ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಎಚ್.ಎಸ್.ಸುರೇಶ್‌ಬಾಬು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ 7ಕ್ಕೆ ಬೆಂಗಳೂರಿನ ಅಂತರಂಗ ಬಹಿರಂಗ ತಂಡದಿಂದ ಬಾಯ್ಕಡ್ಕಿ, ನ.8ರ ಸಂಜೆ 7ಕ್ಕೆ ಶಿವಮೊಗ್ಗದ ಎನ್‌ಇಎಸ್ ಹವ್ಯಾಸಿ ರಂಗ ತಂಡದಿಂದ ಚೆಕಾವ್ ಟು ಶಾಂಪೇನ್, 9ರಂದು ಕದಂಬ ರಂಗ ವೇದಿಕೆಯಿಂದ ನಾ ನೀ ಎಂಬ ನಾಟಕ ಪ್ರದರ್ಶನಗೊಳ್ಳಲಿವೆ ಎಂದರು.