ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರು ರಿದಮ್ಸ್ ಕರೋಕೆ ಕ್ಲಬ್ನಿಂದ ನ.6ರಂದು ‘ಕನ್ನಡದ ಕಂಪು, ಚಿತ್ರಗೀತೆಗಳ ಇಂಪು’ ಶೀರ್ಷಿಕೆಯಡಿ ಜನಪ್ರಿಯ ಚಿತ್ರಗೀತೆಗಳ ಲೈವ್ ಮ್ಯೂಸಿಕ್ ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಸಂಚಾಲಕ ಎಸ್. ಅಮರ್ ತಿಳಿಸಿದರು.
ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಂದು ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡದ ಸುಪ್ರಸಿದ್ಧ ಹಳೆಯ ಹಾಗೂ ಹೊಸ ಸಿನಿಮಾಗಳ ಚಿತ್ರಗೀತೆಗಳನ್ನು ತಂಡದ ಸದಸ್ಯರು ಹಾಡಲಿದ್ದಾರೆ ಎಂದರು.
ರಾಜ್ಯೋತ್ಸವ ಪುರಸ್ಕೃತರಾದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ನಾಗರಾಜ ವಿ.ಭೈರಿ, ಆಕಾಶವಾಣಿ ಪ್ರೊ.ಎ.ಡಿ.ಶ್ರೀನಿವಾಸ್ ಅವರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು. ಗಾಯಕರಾದ ಸುಮಾ, ಅಶ್ವಿನ್ ಅತ್ರಿ, ಪ್ರವೀಣ್ ಗಾಡ್ಕೆ ಇದ್ದರು.