ಮೈಸೂರು ಮೃಗಾಲಯದ ‘ಯುವರಾಜ’ ಜಿರಾಫೆ ಸಾವು

ಮೈಸೂರು ಮೃಗಾಲಯದಲ್ಲಿ ಮೃತಪಟ್ಟ ಯುವರಾಜ ಜಿರಾಫೆ
ಮೈಸೂರು ಮೃಗಾಲಯದಲ್ಲಿ ಮೃತಪಟ್ಟ ಯುವರಾಜ ಜಿರಾಫೆ
Published on
ಮೈಸೂರು: ಮೈಸೂರು ಮೃಗಾಲಯದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಮೃತಪಟ್ಟಿದೆ.
ಯುವರಾಜ ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು. ವೃದ್ಧಾಪ್ಯದಲ್ಲಿದ್ದ ಯುವರಾಜ ಜಿರಾಫೆಯು ಬೆಳಗ್ಗೆ 10.30ಕ್ಕೆ ಮೃತಪಟ್ಟಿತು. 1987ರಲ್ಲಿ ಜರ್ಮನಿಯಿಂದ ತಂದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ 7-12-2001ರಲ್ಲಿ ಜನಿಸಿತು. ನಂತರ ಪ್ರಾಣಿಪಾಲಕರ ಆರೈಕೆಯಲ್ಲಿ ಬೆಳೆಯಿತು.
ಹನಿ ಮತ್ತು ಹೆನ್ರಿ ಜಿರಾಫೆ ಯುವರಾಜ ಜಿರಾಫೆಯ ಜತೆಗೆ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಮತ್ತು ಯುವರಾಜ ಜಿರಾಫೆಗಳು ಜನ್ಮ ನೀಡಿದ್ದು, ಈ ಪೈಕಿ ಯುವರಾಜ ಹೆಚ್ಚು ವರ್ಷಗಳ ಕಾಲ ಬದುಕಿದ ಜಿರಾಫೆಯಾಗಿದೆ. ಅಲ್ಲದೆ, ಮೃಗಾಲಯದಲ್ಲಿ ಹೆಚ್ಚು ವರ್ಷಗಳು ಬದುಕಿದ ಜಿರಾಫೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net