ಫೇಸ್‌ಬುಕ್‌ನಲ್ಲಿ ಡಾ.ಜೋನಾಸ್ ಅಲಿ ಎಂಬ ವ್ಯಕ್ತಿಯು ನಗರದ ಮಹಿಳೆಗೆ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯ ಮೂಡಿತ್ತು. ‘ನಾನು ಇಂಡೋನೇಷಿಯಾದಲ್ಲಿದ್ದು ಎಟಿಎಂ ಕಾರ್ಡ್ ನಿಷ್ಕ್ರೀಯಗೊಂಡಿದ್ದು, ಏರ್ ಟಿಕೆಟ್ ಬುಕ್ ಮಾಡಲು ಹಣ ನೀಡಿ’ ಎಂದು ಡಾ.ಜೋನಾಸ್ ಅಲಿ ಮಹಿಳೆಯಿಂದ ಪ್ರಾರಂಭದಲ್ಲಿ 1.85 ಲಕ್ಷ ರೂ. ಪಡೆದಿದ್ದಾನೆ. ನಂತರ ‘ನಾನು ಭಾರತಕ್ಕೆ ಇದೀಗ ಬಂದಿದ್ದೇನೆ, ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಹಾಗೂ ವಿವಿಧ ಶುಲ್ಕಗಳ ಪಾವತಿ 10.80 ಲಕ್ಷ ರೂ. ಅವಶ್ಯಕತೆ ಇದೆ’ ಎಂದು ಹೇಳಿ ಹಣ ಪಡೆದುಕೊಂಡ. ಅದಾದ ನಂತರ ಮತ್ತೆ 1.55 ಲಕ್ಷ ರೂ. ಕೇಳಿದಾಗ ಅನುಮಾನಗೊಂಡ ಮಹಿಳೆಯು ಸೋಮವಾರ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.