ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಕಪ್‌ಗೆ ತೆರೆ

ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಕಪ್–2026-27’ ಕ್ರೀಡಾಕೂಟ
ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಕಪ್–2026-27’ ಕ್ರೀಡಾಕೂಟ
Published on
ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆಯ ವತಿಯಿಂದ ಸಿಬಿಎಸ್‌ಇ ಜಿಲ್ಲಾ ಮಟ್ಟದ ಅಂತರ್‌ಶಾಲಾ ‘ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಕಪ್–2026-27’ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಮೈಸೂರು ಜಿಲ್ಲೆಯ ವಿವಿಧ ಶಾಲೆಗಳ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, 30 ವಾಲಿಬಾಲ್ ಹಾಗೂ 20 ತ್ರೋಬಾಲ್ ತಂಡಗಳು ಕಣಕ್ಕಿಳಿದಿದ್ದವು. ಯುವ ಕ್ರೀಡಾಪಟುಗಳು ತಮ್ಮ ಪ್ರತಿಭೆ, ತಂಡದ ಸಹಕಾರ, ಶಿಸ್ತು ಹಾಗೂ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು.
ಪ್ರೊ. ಮಲ್ಲಯ್ಯ ಚಂದ್ರಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲೆಯ ಅಧ್ಯಕ್ಷ ಲಯನ್ ಡಾ. ಚೇತನ್ ಎಚ್.ಕೆ., ಕಾರ್ಯದರ್ಶಿ ಲಯನ್ ಶಿವಶಂಕರ್, ಖಜಾಂಚಿ ಲಯನ್ ಅನಿಲ್ ಬಿಜಲಾನಿ ಹಾಗೂ ಪ್ರಾಂಶುಪಾಲೆ ಡಾ. ರೂಪಾ ಕರುಂಬಯ್ಯ ಅವರ ಮಾರ್ಗದರ್ಶನದಲ್ಲಿ ಕ್ರೀಡಾಕೂಟ ನಡೆಯಿತು.


ಥ್ರೋಬಾಲ್

ಬೋಗಾದಿಯ ಕ್ರೈಸ್ಟ್ ಪಬ್ಲಿಕ್ ಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆ ದ್ವಿತೀಯ, ತಾಂಡವಪುರದ ಕ್ರೈಸ್ಟ್ ಪಬ್ಲಿಕ್ ಶಾಲೆ ತೃತೀಯ ಹಾಗೂ ಜೆಎಸ್‌ಎಸ್ ಪಬ್ಲಿಕ್ ಶಾಲೆ ನಾಲ್ಕನೇ ಸ್ಥಾನ ಪಡೆದುಕೊಂಡವು.

ವಾಲಿಬಾಲ್

ಪೊಲೀಸ್ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ ಗಳಿಸಿತು. ವಿವಿಎಸ್ ಬಿಎಂ ಶ್ರೀ ಶಾಲೆ ದ್ವಿತೀಯ, ಜಿಎಸ್‌ಎಸ್‌ಎಸ್ ಶಾಲೆ ತೃತೀಯ ಹಾಗೂ ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆ ನಾಲ್ಕನೇ ಸ್ಥಾನ ಪಡೆದುಕೊಂಡವು.
ವ್ಯವಸ್ಥಾಪಕ ಮಂಡಳಿ, ಸಂಘಟನಾ ಸಮಿತಿ, ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ಕ್ರೀಡಾ ಉತ್ಕೃಷ್ಟತೆ, ತಂಡದ ಸಹಕಾರ ಮತ್ತು ಕ್ರೀಡಾ ಮನೋಭಾವಕ್ಕೆ ಒತ್ತು ನೀಡಿದ ಕ್ರೀಡಾಕೂಟವು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net