ಈ ಮಳಿಗೆಯಲ್ಲಿ ಮೆ 5 ರಂದು 96 ಸೀರೆಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಆ ದಿನ 51 ಸೀರೆಗಳು ಮಾರಾಟವಾಗಿತ್ತು. ನಂತರ ಸಂಜೆ ಸ್ಟಾಕ್‌ಚೆಕ್ ಮಾಡುವ ಸಂದರ್ಭ 1 ಸೀರೆ ಕಡಿಮೆ ಇರುವುದು ಕಂಡು ಬಂತು. ಸೀರೆ ಪತ್ತೆಗಾಗಿ ಕೆಲವು ದಿನಗಳ ಕಾಲ ಶಾಪ್‌ನಲ್ಲಿ ಹುಡುಕಾಟ ನಡೆಸಲಾಯಿತು. ಆದರೆ, ಸೀರೆ ಪತ್ತೆಯಾಗದ ಹಿನ್ನೆಲೆಯಲ್ಲಿ ಸೋಮವಾರ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾಪ್‌ನಲ್ಲಿ ಸಿಸಿ ಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಇದರ ಲಾಭ ಪಡೆದ ಕಳ್ಳರು ಸೀರೆಯನ್ನು ಕಳವು ಮಾಡಿದ್ದಾರೆ.