ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಗೆ ಖಂಡಿಸಿ ಮೈಸೂರು ಕನ್ನಡ ವೇದಿಕೆಯಿಂದ ಪ್ರತಿಭಟನೆ

ಬಾಂಗ್ಲಾ ದೇಶದಲ್ಲಿ ಹಿಂದುಗಳ ಹತ್ಯೆ, ಹಿಂಸಾಚಾರ ಖಂಡಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರದಲ್ಲಿ  ಪ್ರತಿಭಟನೆ ನಡೆಯಿತು. ಎಸ್.ಬಾಲಕೃಷ್ಣ, ಪ್ಯಾಲೇಸ್ ಬಾಬು, ನಾಲಾಬೀದಿ ರವಿ, ಗೋಪಿ, ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಹರೀಶ್ ಇದ್ದರು.
ಬಾಂಗ್ಲಾ ದೇಶದಲ್ಲಿ ಹಿಂದುಗಳ ಹತ್ಯೆ, ಹಿಂಸಾಚಾರ ಖಂಡಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಎಸ್.ಬಾಲಕೃಷ್ಣ, ಪ್ಯಾಲೇಸ್ ಬಾಬು, ನಾಲಾಬೀದಿ ರವಿ, ಗೋಪಿ, ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಹರೀಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೂಡಲೇ ಪ್ರಧಾನಿ ಮಧ್ಯ ಪ್ರವೇಶಿಸಿ ಹಿಂದುಗಳ ರಕ್ಷಣೆಗೆ ಮುಂದಾಗಬೇಕು
  • ಬಾಂಗ್ಲಾ ಪದಚ್ಯುತ ಪ್ರಧಾನಿಗೆ ಭಾರತದಲ್ಲಿ ನೆಲೆ ಕೊಟ್ಟ ಮೇಲೆ ಹಿಂದುಗಳ ಮೇಲಿನ ದಾಳಿ ತೀವ್ರವಾಗಿದೆ
ಮೈಸೂರುಬಾಂಗ್ಲಾ ದೇಶದಲ್ಲಿ ಹಿಂದುಗಳ ಹತ್ಯೆ, ಹಿಂಸಾಚಾರ ಖಂಡಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಗ್ರಹಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಕಳೆದ ಒಂದು ವರ್ಷದಿಂದ ದಾಳಿ ನಡೆಯುತ್ತಿದೆ. ಅಲ್ಲಿನ ಪದಚ್ಯುತ ಪ್ರಧಾನಿಗೆ ಭಾರತದಲ್ಲಿ ನೆಲೆ ಕೊಟ್ಟ ಮೇಲೆ ಹಿಂದುಗಳ ಮೇಲಿನ ದಾಳಿ ತೀವ್ರವಾಗಿದೆ ಎಂದು ದೂರಿದರು.
ಹಿಂದುಗಳ ಮನೆಗೆ ನುಗ್ಗಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಹಿಂಸೆ ನೀಡುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ದೇಶದ ಪ್ರಧಾನಿ ಇದರ ಬಗ್ಗೆ ಒಂದು ಹೇಳಿಕೆಯನ್ನೂ ನೀಡುತ್ತಿಲ್ಲ. ಬದಲಿಗೆ ವಿದೇಶ ಸುತ್ತುವ ಗುಂಗಿನಲ್ಲಿದ್ದಾರೆ . ನಮ್ಮ ದೇಶದಿಂದ ವಿಭಜನೆಯಾದ ಬಾಂಗ್ಲಾದೇಶದಲ್ಲಿನ ಹಿಂದುಗಳಿಗೆ ಯಾವುದೇ ರೀತಿಯ ಸಾಂತ್ವನ ಹೇಳುತ್ತಿಲ್ಲ. ಅಲ್ಲಿರುವ ಹಿಂದುಗಳು ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಿ ಎಂದು ಅಂಗಲಾಚುತ್ತಿದ್ದಾರೆ. ಆದರೆ, ನಮ್ಮ ವಿದೇಶಾಂಗ ಸಚಿವರು ಗಂಟೆಗೊಂದು ಮಾತನಾಡುತ್ತಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರು ಹಿಂದುಗಳ ಮೇಲೆ ಹಲ್ಲೆ ನಡೆಸಲು ಪ್ರೇರಣೆ ನೀಡುತ್ತಿದ್ದಾರೆ. ಈ ಭಯೋತ್ಪಾದಕರನ್ನು ಮಟ್ಟ ಹಾಕಲು ಅಮೆರಿಕಕ್ಕೆ ಮಾಹಿತಿ ನೀಡಿ, ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಈಗಾಗಲೇ ದೇಶದೊಳಗೆ ಬಾಂಗ್ಲಾದಿಂದ ಲಕ್ಷಾಂತರ ಜನ ನುಗ್ಗಿದ್ದು, ಕೆಲವರು ಆಧಾರ್‌ಕಾರ್ಡ್ ಮಾಡಿಸಿಕೊಂಡು ಮತದಾರರಾಗಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೇ ಕಾರಣ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ ಯಾವೊಬ್ಬ ಕಾರ್ಯಕರ್ತರೂ ಬಾಂಗ್ಲಾದೇಶ ಹಿಂದುಗಳ ಪರವಾಗಿ ನಿಲ್ಲುತ್ತಿಲ್ಲ ಎಂದು ದೂರಿದರು. ಕೇವಲ ಹಿಂದು ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿವೆ. ಹೀಗಾಗಿ ಕೂಡಲೇ ಪ್ರಧಾನಿ ಮಧ್ಯ ಪ್ರವೇಶಿಸಿ ಹಿಂದುಗಳ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ಪ್ಯಾಲೇಸ್ ಬಾಬು, ನಾಲಾಬೀದಿ ರವಿ, ಗೋಪಿ, ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಹರೀಶ್, ಸಾಯಿ ಚಾಮರಾಜು, ಎಲ್‌ಐಸಿ ಸಿದ್ದಪ್ಪ, ಹೊನಕೆರೆ ಸ್ವಾಮಿ, ಮಾದಪ್ಪ, ಚಿನ್ನಪ್ಪ, ಶಿವುಗೌಡ, ಸ್ವಾಮಿಗೈಡ್, ರಮೇಶ್, ರೈತ ಪರ್ವ ಅಧ್ಯಕ್ಷ ಅರುಣ್ ಇದ್ದರು,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net