

ಪ್ರಮುಖ ಮುಖ್ಯಾಂಶಗಳು
ಸೂರ್ಯನ ಕಾವಿನಿಂದ ಉಂಟಾಗುವ ಅನಾರೋಗ್ಯಕ್ಕೆ ತುತ್ತಾಗುವ ಜನರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು 30 ಹಾಸಿಗೆಯನ್ನು ಸಿದ್ಧಪಡಿಸಿ, ಅಗತ್ಯ ಔಷಧ, ವೈದ್ಯರು, ನರ್ಸ್‌ಗಳನ್ನು ನಿಯೋಜಿಸಲಾಗಿದೆ. ನಿರ್ಜಲೀಕರಣದ ನಿವಾರಣೆಗಾಗಿ ದಿನಕ್ಕೆ 6-7 ಲೀಟರ್ ನೀರು ಕುಡಿಯಬೇಕು. ಸಕ್ಕರೆ ಅಂಶ ರಹಿತ ಹಣ್ಣಿನ ರಸ, ಎಳನೀರು ಕುಡಿಯಬೇಕು. ಸುಸ್ತಾದ ತಕ್ಷಣವೇ ನೀರು ಕುಡಿದು ನಿರ್ಜಲೀಕರಣ ತಪ್ಪಿಸಿಕೊಳ್ಳಬೇಕು. ಉಪ್ಪು, ಸಕ್ಕರೆ, ಮಸಾಲೆ ಆಹಾರವನ್ನು ತಗ್ಗಿಸಬೇಕು. ಇದರಿಂದ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು.