ಈ ಬಾರಿ ಒಟ್ಟು 35,265 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇದರಲ್ಲಿ 28,390 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ ಹೊಸದಾಗಿ 32,374 ವಿದ್ಯಾರ್ಥಿಗಳು, 2,199 ಪುನರಾವರ್ತಿತ, ಖಾಸಗಿಯಾಗಿ 692 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಹೊಸದಾಗಿ ಪರೀಕ್ಷೆ ಬರೆದಿದ್ದ 32,374 ವಿದ್ಯಾರ್ಥಿಗಳಲ್ಲಿ 27,454 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.80.8ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 2,199 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 590 ವಿದ್ಯಾರ್ಥಿಗಳು ಪಾಸಾಗಿದ್ದು, ಕೇವಲ ಶೇ.26.83 ಫಲಿತಾಂಶ ಬಂದಿದೆ. 692 ಖಾಸಗಿಯಾಗಿ ವಿದ್ಯಾರ್ಥಿಗಳ ಪೈಕಿ 346 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.50 ಫಲಿತಾಂಶ ಬಂದಿದೆ.