ಮೈಸೂರು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಮರು ರಚನೆ: ಹರ್ಷನ್

 ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಏಕಲವ್ಯ ಪ್ರಶಸ್ತಿ ಪುರಸ್ಕೃತ ವಾಲಿಬಾಲ್ ಆಟಗಾರರು, ಹಿರಿಯ ಕೋಚ್‌ಗಳು, ವಾಲಿಬಾಲ್ ಕ್ರೀಡಾಭಿಮಾನಿಗಳ ಸಭೆ ನಡೆಯಿತು. ಹರ್ಷನ್, ಆಂಟನಿ ಜೋಸೆಫ್, ಕೃಷ್ಣೇಗೌಡ, ಪರಮೇಶ್ವರ್, ಎಂ.ಎಸ್.ಲೋಹಿತ್ ಗೌಡ, ಆಕಾಶ್, ಸಿದ್ದೇಶ್ ಇತರರು ಇದ್ದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಏಕಲವ್ಯ ಪ್ರಶಸ್ತಿ ಪುರಸ್ಕೃತ ವಾಲಿಬಾಲ್ ಆಟಗಾರರು, ಹಿರಿಯ ಕೋಚ್‌ಗಳು, ವಾಲಿಬಾಲ್ ಕ್ರೀಡಾಭಿಮಾನಿಗಳ ಸಭೆ ನಡೆಯಿತು. ಹರ್ಷನ್, ಆಂಟನಿ ಜೋಸೆಫ್, ಕೃಷ್ಣೇಗೌಡ, ಪರಮೇಶ್ವರ್, ಎಂ.ಎಸ್.ಲೋಹಿತ್ ಗೌಡ, ಆಕಾಶ್, ಸಿದ್ದೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಏಕಲವ್ಯ ಪ್ರಶಸ್ತಿ ಪುರಸ್ಕೃತ ವಾಲಿಬಾಲ್ ಆಟಗಾರರು, ಹಿರಿಯ ಕೋಚ್‌ಗಳು, ವಾಲಿಬಾಲ್ ಕ್ರೀಡಾಭಿಮಾನಿಗಳ ಸಭೆ
  • ಏಕಲವ್ಯ ಪ್ರಶಸ್ತಿ ಪುರಸ್ಕೃತ ವಾಲಿಬಾಲ್ ಆಟಗಾರರು, ಹಿರಿಯ ಕೋಚ್‌ಗಳು, ವಾಲಿಬಾಲ್ ಕ್ರೀಡಾಭಿಮಾನಿಗಳು ಸೇರಿ ಎಲ್ಲರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಇನ್ನು ಮುಂದೆ ವರ್ಷಪೂರ್ತಿ ವಾಲಿಬಾಲ್ ಟೂರ್ನಿಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ
  • ವಾಲಿಬಾಲ್ ಕ್ರೀಡೆಯನ್ನು ತಾಲೂಕು, ಹೋಬಳಿ, ಶಾಲೆ, ಕಾಲೇಜು ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಸಂಸ್ಥೆಯ ಗುರಿಯಾಗಿದೆ
ಮೈಸೂರು: ಜಿಲ್ಲೆಯಲ್ಲಿ ಮತ್ತೆ ವಾಲಿಬಾಲ್ ಕ್ರೀಡೆಯ ಗತ ವೈಭವ ಮರುಕಳಿಸಲು ಪ್ರಯತ್ನಿಸಲಾಗುತ್ತದೆ. 2011ರ ಕ್ರೀಡಾ ಸಂಹಿತೆ ಪ್ರಕಾರ ಜಿಲ್ಲೆಯಲ್ಲಿ ಹಾಲಿ ಇರುವ ಮೈಸೂರು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಮರು ರಚನೆ ಮಾಡಿ ವರ್ಷವಿಡೀ ವಾಲಿಬಾಲ್ ಚಟುವಟಿಕೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಹರ್ಷನ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಏಕಲವ್ಯ ಪ್ರಶಸ್ತಿ ಪುರಸ್ಕೃತ ವಾಲಿಬಾಲ್ ಆಟಗಾರರು, ಹಿರಿಯ ಕೋಚ್‌ಗಳು, ವಾಲಿಬಾಲ್ ಕ್ರೀಡಾಭಿಮಾನಿಗಳ ಸಭೆಯಲ್ಲಿ ಮಾತನಾಡಿದರು.
1957ರಲ್ಲಿಯೇ ಮೈಸೂರು ಸಂಸ್ಥಾನ ನೇತೃತ್ವದ ರಾಜ್ಯ ಮಟ್ಟದ ವಾಲಿಬಾಲ್ ಸಂಸ್ಥೆಯ ತಂಡ ಮೊದಲ ಸ್ಥಾನ ಪಡೆದಿತ್ತು. ಅದನ್ನು ಹೊರತುಪಡಿಸಿದರೆ 2019ರಲ್ಲಿ ಮತ್ತೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅಂದಿನಿಂದಲೂ ಮೈಸೂರಿನಲ್ಲಿ ವಾಲಿಬಾಲ್ ಸಂಸ್ಥೆ ಅಸ್ಥಿತ್ವದಲ್ಲಿದೆ. ಇದೀಗ ಹೊಸ ನಿಯಮದನುಸಾರ ತಾಲೂಕು ಮಟ್ಟದ ಸಮಿತಿಗಳನ್ನು ಮಾಡಿ ಅವರು ಜಿಲ್ಲಾ ಮಟ್ಟದ ಅಸೋಸಿಯೇಷನ್ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಿದೆ. ತನ್ಮೂಲಕ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅನ್ನು ಮರು ರಚಿಸಬೇಕಿದೆ. ಅದಕ್ಕಾಗಿ ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಏಕಲವ್ಯ ಪ್ರಶಸ್ತಿ ಪುರಸ್ಕೃತ ವಾಲಿಬಾಲ್ ಆಟಗಾರರು, ಹಿರಿಯ ಕೋಚ್‌ಗಳು, ವಾಲಿಬಾಲ್ ಕ್ರೀಡಾಭಿಮಾನಿಗಳು ಸೇರಿ ಎಲ್ಲರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಇನ್ನು ಮುಂದೆ ವರ್ಷಪೂರ್ತಿ ವಾಲಿಬಾಲ್ ಟೂರ್ನಿಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹರ್ಷನ್ ತಿಳಿಸಿದರು.

ಹೋಬಳಿ ಮಟ್ಟದಲ್ಲಿ ಆಯೋಜನೆ

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಆಂಟನಿ ಜೋಸೆಫ್ ಮಾತನಾಡಿ, ವಾಲಿಬಾಲ್ ಕ್ರೀಡೆಯನ್ನು ತಾಲೂಕು, ಹೋಬಳಿ, ಶಾಲೆ, ಕಾಲೇಜು ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಸಂಸ್ಥೆಯ ಗುರಿಯಾಗಿದೆ. ಅದಕ್ಕಾಗಿ ಸಂಸ್ಥೆಯ ವಾರ್ಷಿಕ ಚಟುವಟಿಕೆಗೆ ಈ ಅಂಶವನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದರು.

ಜೂನಿಯರ್ ನ್ಯಾಷನಲ್ ಕ್ಯಾಂಪ್

ವಾಲಿಬಾಲ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಮೈಸೂರಿನ ಮಾಜಿ ಆಟಗಾರರಾದ ಹೇಮಲತಾ, ತೇಜಸ್ವಿನಿ ಜತ್ತಿ, ಹನಿ ಮುದ್ದಯ್ಯ, ಪವಿತ್ರಾಗೌಡ ಅವರು ಜಿಲ್ಲೆಯಲ್ಲಿ ಜೂನಿಯರ್ ನ್ಯಾಷನಲ್ ಕ್ಯಾಂಪ್ ಅನ್ನು ಮೈಸೂರಿನಲ್ಲಿಯೇ ಆಯೋಜಿಸಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೆ, ರಾಜ್ಯ ಮಟ್ಟದ ಪ್ರೊ.ವಾಲಿಬಾಲ್ ಲೀಗ್ ಮಾದರಿಯಲ್ಲೇ ಜಿಲ್ಲಾ ಮಟ್ಟದಲ್ಲೂ ಪ್ರೊ.ವಾಲಿಬಾಲ್ ಲೀಗ್ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಹೊಸ ನಿಯಮದಂತೆ 60 ವರ್ಷ ಮೇಲ್ಪಟ್ಟವರಿಗೆ ಅಸೋಸಿಯೇಷನ್‌ನಲ್ಲಿ ಅವಕಾಶವಿರುವುದಿಲ್ಲ. ಒಮ್ಮೆ ಆಯ್ಕೆಯಾದವರಿಗೆ ಮರು ಆಯ್ಕೆಗೆ ಅವಕಾಶ ನೀಡುವುದಿಲ್ಲ. ಈ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಲಾಗುವುದು ಎಂದರು.
ಹಿರಿಯ ವಾಲಿಬಾಲ್ ತರಬೇತುದಾರರಾದ ಕೃಷ್ಣೇಗೌಡ, ಪರಮೇಶ್ವರ್, ಕಾರ್ಯಕ್ರಮ ಆಯೋಜಕರಾದ ಎಂ.ಎಸ್.ಲೋಹಿತ್ ಗೌಡ, ಆಕಾಶ್, ಸಿದ್ದೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net