ಮಹಿಳೆಯರ ವಿಭಾಗದಲ್ಲಿ ಕವಲಂದೆ ಪೊಲೀಸ್ ಠಾಣೆಯ ದೀಪಾ ಪಾಳಕೆ ಅವರು ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 100 ಮೀ., 200 ಮೀ., ಉದ್ದ ಜಿಗಿತದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು 18 ಅಂಕವನ್ನು ಪಡೆದಿದ್ದರು. ಅಧಿಕಾರಿ ವರ್ಗದವರ ಕ್ರಿಕೆಟ್‌ನಲ್ಲಿ ಎಸ್‌ಪಿ ತಂಡ ಗೆಲುವು ಸಾಧಿಸಿದ್ದು, ಎಎಸ್‌ಪಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.