ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಶಿಕ್ಷಕಿ

ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್‌ಪೋಸ್ಟ್‌ನಲ್ಲಿ ತಾರಕ ಫಂಕ್ಷನ್ ಹಾಲ್‌ನಲ್ಲಿ  ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆರವರ ಜನ್ಮ ದಿನಾಚರಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕಿಯರಿಗೆ ಅಕ್ಷರದವ್ವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್‌ಪೋಸ್ಟ್‌ನಲ್ಲಿ ತಾರಕ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆರವರ ಜನ್ಮ ದಿನಾಚರಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕಿಯರಿಗೆ ಅಕ್ಷರದವ್ವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
Published on
ಎಚ್.ಡಿ. ಕೋಟೆ: ಸ್ವಾತಂತ್ರ ಪೂರ್ವಕ್ಕೂ ಮೊದಲು ದೇಶದಲ್ಲಿ ಶಿಶು ಹತ್ಯೆ ಪ್ರತಿಬಂಧಕ ಗಣವನ್ನು 1853ರಲ್ಲಿ ಸ್ಥಾಪಿಸಿ ಸಮರ್ಪಣಾ ಭಾವದಿಂದ ಹೋರಾಟ ಮಾಡಿದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಎಂದು ಶಿಕ್ಷಕಿ ಸುಮಾ ತಿಳಿಸಿದರು.
ಪಟ್ಟಣದ ಹ್ಯಾಂಡ್‌ಪೋಸ್ಟ್ ನ ತಾರಕ ಫಂಕ್ಷನ್ ಹಾಲ್‌ನಲ್ಲಿ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕರ ಫೆಡರೇಷನ್, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆ ಮತ್ತು 2026ರ ಅಕ್ಷರದವ್ವ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರೃ ಇಲ್ಲದ ಸಮಯದಲ್ಲೇ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಬಿರುದನ್ನು ಬ್ರಿಟಿಷರಿಂದಲೇ ಪಡೆದ ಹೆಗ್ಗಳಿಕೆ ಸಾವಿತ್ರಿಬಾಯಿ ಫುಲೆ ಅವರಿಗೆ ಸೇರುತ್ತದೆ. ಮಹಾರಾಷ್ಟ್ರದಲ್ಲಿ ಮಹಿಳಾ ಕೇಶಮುಂಡನಕ್ಕೆ ಅಂತ್ಯವಾಡಿದ ಧೀರ ಮಹಿಳೆ ಫುಲೆ. ಅವರ ಆದರ್ಶ ಜೀವನವನ್ನು ಎಲ್ಲರಿಗೂ ತಿಳಿಸುವ ಕಾರ್ಯವಾಗಬೇಕು ಎಂದರು.
ಜನಪರ ಸಾಹಿತ್ಯ ಸಂಘದ ಮಹೇಶ್ ಚಿಕ್ಕಲ್ಲೂರು ಮಾತನಾಡಿ, ಇಂದಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಶಿಕ್ಷಕರು ವಿದ್ಯಾರ್ಥಿಗಳನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ತಿದ್ದಬೇಕು, ಆದರೀಗ ತಂದೆ ಮಕ್ಕಳ ನಡುವೆ ವೈಷಮ್ಯ, ಗಂಡ ಹೆಂಡತಿ ನಡುವೆ ವೈಷಮ್ಯ, ಯಥೇಚ್ಛವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಅಂತಹ ಘಟನೆಗಳನ್ನೇ ಮಾದರಿಯನ್ನಾಗಿಟ್ಟುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದು ಬೇಸರಿಸಿದರು.
ವಿವಿಧ ವಿಷಯಗಳಲ್ಲಿ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಮಹೇಶ್ ಚಿಕ್ಕಲೂರು ಅವರು ಹಾಸ್ಯ ಲಾಸ್ಯ ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ದನಿಕಾ ಹಾಗೂ ಸಮನ್ವಿ ಭರತನಾಟ್ಯ ಪ್ರದರ್ಶಿಸಿದರು. ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕಿಯರಿಗೆ ಅಕ್ಷರದವ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೃಷ್ಣಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಗದೀಶ್, ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ಸಿಲಿವಿಯಾ, ತಾಲೂಕು ಅಧ್ಯಕ್ಷೆ ಪಿ. ಪ್ರತಿಭಾ, ಪ್ರಧಾನ ಕಾರ್ಯದರ್ಶಿ ರೂಪಾ ಪ್ರಮೋದ್, ಬಬಿತಾರಾಣಿ, ಸುಮಾ, ಯಶ್ವಂತ್‌ಕುಮಾರ್, ವೀಣಾ, ದೊರೆಸ್ವಾಮಿ, ರೇಖಾ, ಪುಟ್ಟಾಚಾರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಪ್ರಮೋದ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net