ಹಿಂದೂ ಧರ್ಮ ಸಂಸ್ಕೃತಿಯ ಪ್ರತೀಕ

ಕೊಪ್ಪ ಗ್ರಾಮದಲ್ಲಿ ಹಿಂದೂ ಸಮಂಜೋಸವ ಆಯೋಜನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಧರ್ಮ ಸಮಜೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಅಪ್ಪಾಜಿ ಸ್ವಾಮೀಜಿ, ದೀಪಾ, ಡಿ.ಕರಿಯಣ್ಣ, ಸಿ.ಎಸ್. ರೇಣುಕಸ್ವಾಮಿ, ನಾರಾಯಣ, ವಿ.ರಾಜೇಂದ್ರ ,ಹರೀಶ್, ಇದ್ದರು.
ಕೊಪ್ಪ ಗ್ರಾಮದಲ್ಲಿ ಹಿಂದೂ ಸಮಂಜೋಸವ ಆಯೋಜನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಧರ್ಮ ಸಮಜೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಅಪ್ಪಾಜಿ ಸ್ವಾಮೀಜಿ, ದೀಪಾ, ಡಿ.ಕರಿಯಣ್ಣ, ಸಿ.ಎಸ್. ರೇಣುಕಸ್ವಾಮಿ, ನಾರಾಯಣ, ವಿ.ರಾಜೇಂದ್ರ ,ಹರೀಶ್, ಇದ್ದರು.
Published on
ಬೈಲುಕುಪ್ಪೆ: ಹಿಂದೂ ಧರ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ದಿಂಡುಗಾಡು ಮಠದ ಅಪ್ಪಾಜಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವ ಆಯೋಜನೆ ಸಮಿತಿ ವತಿಯಿಂದ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಪ್ರತೀಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಸಂಸ್ಕೃತಿಯೊಂದಿಗೆ ಜೀವನ ನಡೆಸಬೇಕು, ಆಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ. ಭಾರತದ ಸಂಸ್ಕೃತಿಯನ್ನು ಇತರ ರಾಷ್ಟ್ರಗಳು ಇಂದು ಅಳವಡಿಸಿಕೊಳ್ಳುತ್ತಿವೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕೃತಿ ಮತ್ತು ಧಾರ್ಮಿಕ ಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.
ಮಾತೃ ಶಕ್ತಿ ಕೇಂದ್ರದ ಮಹಿಳಾ ಪ್ರತಿನಿಧಿ ದೀಪಾ ಮಾತನಾಡಿ, ಹಿಂದೂ ಧರ್ಮದೊಂದಿಗೆ ಭರತ ಭೂಮಿಯಲ್ಲಿ ಜನಿಸಿರುವ ನಾವೆಲ್ಲರೂ ಧನ್ಯರು. ಹಿಂದೂ ಧರ್ಮದ ಆಚರಣೆಯಲ್ಲಿ ವೈಜ್ಞಾನಿಕತೆ ಇದೆ. ದ್ವೇಷ, ಅಸೂಯೆ ಬಿಟ್ಟು ಪ್ರತಿಯೊಬ್ಬರನ್ನು ಸಾಮರಸ್ಯದಿಂದ ಕಾಣುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.
ವಕೀಲ ಛಲವಾದಿ ಡಿ.ಕರಿಯಣ್ಣ ಮಾತನಾಡಿ, ಭಾರತ ಮಾತೆ ತ್ಯಾಗ ಬಲಿದಾನದ ಸಂಕೇತ. ಭಾರತ ಮಾತೆಯನ್ನು ಪ್ರತಿಯೊಬ್ಬರೂ ಪೂಜಿಸುವ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಾಶಪಡಿಸಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶವನ್ನು ಹಿಂದುಗಳು ಮಾಡಿಕೊಡಬಾರದು. ಒಗ್ಗಟ್ಟಿನ ಮೂಲಕ ಇಂತಹ ದುಷ್ಟರನ್ನು ಮಟ್ಟ ಹಾಕುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿಯ ಉತ್ಸವಮೂರ್ತಿ, ಭಾರತ ಮಾತೆಯ ಮೂರ್ತಿಯೊಂದಿಗೆ ಕಳಸ ಹೊತ್ತ ಮಹಿಳೆಯರು ಕೊಪ್ಪದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ, ಮೆರವಣಿಗೆ ಮೂಲಕ ಸಾಗಿ ವೇದಿಕೆ ತಲುಪಿದ ಬಳಿಕ ಸಭಾ ಕಾರ್ಯಕ್ರಮಕ್ಕೆ ಆರಂಭವಾಯಿತು.
ಹಿಂದೂ ಸಮಾಜೋತ್ಸವ ಆಯೋಜನೆ ಸಮಿತಿಯ ತಾಲೂಕು ಅಧ್ಯಕ್ಷ ವಕೀಲ ಎಂ.ಸಿ.ಹರೀಶ್, ಸರಸಂಚಾಲಕ ಸಚ್ಚಿದಾನಂದ, ಮುಖಂಡರಾದ ರೇಣುಕಾ ಸ್ವಾಮಿ, ನಾರಾಯಣ,ನಟರಾಜ್, ವಿ.ರಾಜೇಂದ್ರ, ಯಾದವಾಚಾರ್, ಭರತ್, ಚೇತನ್, ಮಂಜು ಎಂ.ಎಂ.ರಾಜೇಗೌಡ, ಶ್ರೀನಿವಾಸ್ , ಮಂಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net