ಮದ್ಯದ ಹಣದ ವಿಚಾರಕ್ಕೆ ಕೊಲೆ

ಕೊಲೆಯಾದ ಮೊಳೆಯೂರು ಗ್ರಾಮಕ್ಕೆ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದರು.
ಕೊಲೆಯಾದ ಮೊಳೆಯೂರು ಗ್ರಾಮಕ್ಕೆ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮೊಳೆಯೂರು ಗ್ರಾಮದ ರಮೇಶ್ ಮೃತ
ಸರಗೂರು:  ಮದ್ಯದ ಹಣ ಹಾಗೂ ಹಳೇ ವೈಷಮ್ಯಕ್ಕೆ ತಾಲೂಕಿನ ಮೊಳೆಯೂರು ಗ್ರಾಮದ ಜಮೀನಿನಲ್ಲಿ ಬುಧವಾರ ರಾತ್ರೋರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. 
ತಾಲೂಕಿನ ಮೊಳೆಯೂರು ಗ್ರಾಮದ ಸಿದ್ದೇಗೌಡರ ಮಗ ರಮೇಶ್ (38)ಹತ್ಯೆಗೀಡಾದವರು. ಇದೇ ಗ್ರಾಮದ ಹನು(35) ಕೊಲೆ ಮಾಡಿದ ಆರೋಪಿ. ಕಳೆದ ಹಲವು ದಿನಗಳಿಂದ ಇವರಿಬ್ಬರ ನಡುವೆ ವೈಷಮ್ಯವಿತ್ತು. ಅಲ್ಲದೇ ಇಬ್ಬರಿಗೂ ಮದ್ಯ ಹಣದ ವಿಚಾರಕ್ಕಾಗಿ ಗಲಾಟೆ ನಡೆಯುತ್ತಿತ್ತು. ಇದರ ಬಗ್ಗೆ ಪಂಚಾಯಿತಿ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ಬುಧವಾರ ಸಂಜೆ ಇವರ ಮಧ್ಯೆ ಗಲಾಟೆ ನಡೆದಿದೆ. ಅಕ್ಕಪಕ್ಕದ ಜನ ಜಗಳ ಬಿಡಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ ಇವರ ಜಗಳ ಇಲ್ಲಿಗೆ ಮುಗಿದಿರಲಿಲ್ಲ. ರಾತ್ರಿ 10.30ರಲ್ಲಿ ಜಮೀನಿನಲ್ಲಿ ಮತ್ತೆ ಜಗಳ ಶುರುವಾಗಿದೆ.
ಈ ವೇಳೆ ಹನು ರಮೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ರಮೇಶ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗ್ರಾಮಸ್ಥರು ಕೂಡಲೇ ಸರಗೂರು ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೊಲೆ ಮಾಡಿ ಗ್ರಾಮದಲ್ಲೇ ಅಡಗಿಕೊಂಡಿದ್ದ ಆರೋಪಿ ಹನುನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಮರಣೋತ್ತರ ಪರಿಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ನೀಡಲಾಯಿತು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್, ಡಿವೈಎಸ್ಪಿ ರವಿ, ವೃತ್ತ ನಿರೀಕ್ಷಕ ಪ್ರಸನ್ನಕುಮಾರ್, ಉಪ ನಿರೀಕ್ಷಕ ಆರ್.ಕಿರಣ್, ಸಿಬ್ಬಂದಿ ಆನಂದ್, ಇಮ್ರಾನ್, ಜಗದೀಶ್ ಶೆಟ್ಟಿ,ದೇವರಾಜು, ಶಿವರಾಜು, ರಮೇಶ್, ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net