ಅಂದು ಬೆಳಿಗ್ಗಿನ ಜಾವ ದೇವಾಲಯದಲ್ಲಿ ಅಮ್ಮ ನವರಿಗೆ ಅಭಿಷೇಕದ ವಿಶೇಷ ಪೂಜೆಗಳು ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನೇರವೇರಿದವು ರಥೋತ್ಸವದ ನಿಮಿತ್ತ ಶ್ರೀ ರಾಕಸಮ್ಮನವರಿಗೆ ದೇಗುಲದಲ್ಲಿ ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು ಅಮ್ಮ ನವರ ಉತ್ಸವ ಮೂರ್ತಿಗೆ ಕಾವೇರಿ ಕಪಿಲಾ ನದಿಯ ದಡದಲ್ಲಿ ಹೋಮ ನಡೆಸಿ ಪೂಜೆ ಸಲ್ಲಿಸಿದ ಬಳಿಕ ಅಮ್ಮ ನವರನ್ನು ರಥದಲ್ಲಿ ಪ್ರತಿಷ್ಟಾಪಿಸಿ ವಿವಿಧ ಬಗೆಯ ಹೂವಿನಿಂದ ಅಲಂಕಾರಿಸಿ ರಾತ್ರಿ 9 ಗಂಟೆಯ ನಂತರ ವಿಶೇಷ ಪೂಜೆಯೊಂದಿಗೆ ರಥೋತ್ಸವಕ್ಕೆ ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಸಹಸ್ರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದಾರಿಯುದ್ದಕ್ಕೂ ಹರಕೆ ಪೂಜೆ ಸಲ್ಲಿಸಿ ನಮಿಸಿದರು.ಯುವ ಸಮೂಹ ಪಟಾಕಿ ಸಿಡಿಸಿ ಸಂಭ್ರಮಿಸಿದರು.