‘ನನ್ನನ್ನು ನೋಡಲು ವ್ಯಕ್ತಿಯೊಬ್ಬರು ಬರುತ್ತಾರೆ, ಅವರು ಬಂದರೆ ಕಳುಹಿಸಿಕೊಡು’ ಎಂದು ಮಹಿಳೆಯು ನಾಗರಾಜ್‌ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಭೇಟಿಯಾಗಲು ಆಗಮಿಸಿದ ವ್ಯಕ್ತಿಯನ್ನು ಆಕೆ ಇರುವ ಕೊಠಡಿಗೆ ನಾಗರಾಜು ಕಳುಹಿಸಿಕೊಟ್ಟ. ಈ ಸಂದರ್ಭ ಲಾಡ್ಜ್‌ಗೆ ಆಗಮಿಸಿದ 6 ಜನರ ಗುಂಪೊಂದು ‘ತಲೆ ಹಿಡಿಯುವ ಕೆಲಸ ಮಾಡುತ್ತಿದ್ದೀಯಾ’ ಎಂದು ನಾಗರಾಜುಗೆ ಬೈದು, ಬೆದರಿಸಿ ಕ್ಯಾಷ್ ಕೌಂಟರ್‌ನಲ್ಲಿದ್ದ 14000 ರೂ.ಗಳನ್ನು ಬಲವಂತವಾಗಿ ಪಡೆದರು. ನಂತರ ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭ ನಾಗರಾಜು ಅವರು ತಮ್ಮ ಸ್ನೇಹಿರ ಬಳಿಯಿಂದ ಒಟ್ಟು 30 ಸಾವಿರ ರೂ.ಗಳನ್ನು ಫೋನ್‌ಪೇ ಮೂಲಕ ಪಡೆದುಕೊಂಡರು. ನಂತರ ನಾಗರಾಜು ಅವರ ಫೋನ್‌ಪೇನಿಂದ ಮೂವರು ಆರೋಪಿಗಳಿಗೆ ಕ್ರಮವಾಗಿ 10,000 ರೂ., 10,500 ರೂ. ಹಾಗೂ 10,000 ರೂ.ಗಳನ್ನು ಕಳುಹಿಸಲಾಗಿದೆ. ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.