ಶ್ರೀ ತ್ರಿಪುರ ಸುಂದರಿ ದೇವಾಲಯದಲ್ಲಿ ದೀಪೋತ್ಸವ ಇಂದು

ಶ್ರೀ ತ್ರಿಪುರ ಸುಂದರಿ ದೇವಿ
ಶ್ರೀ ತ್ರಿಪುರ ಸುಂದರಿ ದೇವಿ
Published on
ಮೂಗೂರು: ಕಾರ್ತಿಕ ಮಾಸದ ಅಂಗವಾಗಿ ಇಲ್ಲಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ಸೋಮವಾರ ಸಂಜೆ  ದೀಪೋತ್ಸವ ಸಂಭ್ರಮದೊಂದಿಗೆ ವಿಶೇಷ ಪೂಜೆ ಜರುಗಲಿದೆ. 
ಸೋಮವಾರ ಬೆಳಗ್ಗೆ ಅಮ್ಮನವರಿಗೆ ಅಭಿಷೇಕ ಪೂಜೆ ಸಲ್ಲಿಸಿ ಸಂಜೆ ದೇವಾಲಯದಲ್ಲಿ ಮೈಸೂರಿನ ನಿವಾಸಿ ದೇಶಿಗೌಡರು ಶ್ರೀ ತ್ರಿಪುರ ಸುಂದರಿ ಅಮ್ಮನವರಿಗೆ ಹೂವಿನ ಸೀರೆ ಅಲಂಕಾರವನ್ನು ಸೇವಾರ್ಥದಾರರಾಗಿ ನೆರವೇರಿಸಲಿದ್ದಾರೆ ಎಂದು ದೇಗುಲದ ಅರ್ಚಕರಾದ ನಂಜುಂಡಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net