ಉದಯರವಿಗೆ ಸಚಿವ ಶಿವರಾಜ್ ಎಸ್.ತಂಗಡಗಿ ಭೇಟಿ

ಕುವೆಂಪು ಅವರ ನಿವಾಸ
ಕುವೆಂಪು ಅವರ ನಿವಾಸ
Published on
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಸೋಮವಾರ ನಗರದ ವಿವಿ ಪುರಂನಲ್ಲಿರುವ ಕುವೆಂಪು ಅವರ ನಿವಾಸ ಉದಯರವಿಗೆ ಭೇಟಿ ನೀಡಿ ವೀಕ್ಷಿಸಿದರು.
ಅವರು ಬಳಕೆ ಮಾಡುತ್ತಿದ್ದ ವಸ್ತುಗಳು, ಅಧ್ಯಯನ ಮಾಡುತ್ತಿದ್ದ ಕೊಠಡಿ, ಪೂಜಾ ಕೊಠಡಿ, ಊಟದ ಹಾಲ್ ಎಲ್ಲವನ್ನೂ ವೀಕ್ಷಿಸಿದ ಬಳಿಕ ಕುವೆಂಪು ಕುಟುಂಬ ಸದಸ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ರಾಷಟ್ರೆಕವಿ ಕುವೆಂಪು ಅವರ ನಿವಾಸವನ್ನು ಸ್ಮಾರಕ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ಅವರ ನಿವಾಸವನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ವೈಯಕ್ತಿಕವಾಗಿ ನನಗೆ ಆಸೆ ಇದೆ. ಆದರೆ ನಾನು ಎಲ್ಲರಂತೆ ಭರವಸೆ ನೀಡಿ ಹೋಗುವವನಲ್ಲ. ಹಾಗಾಗಿ ಈಗಾಗಲೇ ಏನೂ ಹೇಳುವುದಿಲ್ಲ. ಮುಂದಿನ ಮೂರು ದಿನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಕುರಿತು ಚರ್ಚಿಸಲು ಆಹ್ವಾನಿಸುತ್ತಾರೆ. ಆಗ ನಾನು ಈ ಕುರಿತು ಅವರೊಂದಿಗೆ ಚರ್ಚಿಸುತ್ತೇನೆ. ಆ ಸಂದರ್ಭದಲ್ಲಿ ಕುವೆಂಪು ಅವರ ಅಳಿಯ ಡಾ.ಚಿದಾನಂದಗೌಡ ಅವರನ್ನೂ ಕರೆಸಿ ಮಾತನಾಡುತ್ತೇವೆ. ನಂತರ ಸರ್ಕಾರದಿಂದ ಸೂಕ್ತ ನಿರ್ಧಾರ ಪ್ರಕಟಿಸುತ್ತೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net