ವರ್ಷದ ಅಂತ್ಯದಲ್ಲಿ ನಗರಸಭೆ ಚುನಾವಣೆ

ಪೌರಾಡಳಿತ ಸಚಿವರಾದ ಬಾಲಕೃಷ್ಣ ನಂಜನಗೂಡಿನ ಶ್ರೀ ಕಂಠೇಶ್ವರ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಾಸಕರಾದ ದರ್ಶನ್ ಧ್ರುವನಾರಾಯಣ ಇದ್ದರು.
ಪೌರಾಡಳಿತ ಸಚಿವರಾದ ಬಾಲಕೃಷ್ಣ ನಂಜನಗೂಡಿನ ಶ್ರೀ ಕಂಠೇಶ್ವರ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಾಸಕರಾದ ದರ್ಶನ್ ಧ್ರುವನಾರಾಯಣ ಇದ್ದರು.
Published on
* ಸಚಿವರಾದ ನಂತರ ಇದೇ ಮೊದಲ ಬಾರಿಗೆ ಭೇಟಿ
ನಂಜನಗೂಡು: : ಎಚ್.ಸಿ.ಬಾಲಕೃಷ್ಣನ್ ಸಚಿವರಾದ ನಂತರ ಮೊದಲ ಬಾರಿಗೆ ಸೋಮವಾರ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯಕ್ಕೆ ಗೆ ಭೇಟಿ ನೀಡಿ, ದೇವರ ದರ್ಶನ ಪಡೆದರು.
ಸುಮಾರು 45 ನಿಮಿಷಗಳ ಕಾಲ ಸ್ವಾಮಿಯ ಸನ್ನಿಧಿಯಲ್ಲಿ ಧ್ಯಾನಮಗ್ನರಾದ ಸಚಿವರು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ನಂತರ ಪಾರ್ವತಿ ಅಮ್ಮನವರ ದರ್ಶನ ಪಡೆದು ಕುಂಕುಮಾರ್ಚನೆ ಪೂಜೆ ಸಲ್ಲಿಸಿದರು. ನಂತರದಲ್ಲಿ ನಂದಿ, ನಂತರ ಕ್ಷೇತ್ರ ಪಾಲಕ ಕಾಲಭೈರವೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಪೌರಾಯುಕ್ತ ಬಸವರಾಜು, ದೇವಾಲಯದ ಇಒ ಸಿ.ಜಿ.ಕೃಷ್ಣ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸವಗೌಡ ಇತರರು ಇದ್ದರು.
ವರ್ಷದ ಅಂತ್ಯದಲ್ಲಿ ನಗರಸಭೆ ಚುನಾವಣೆ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಶ್ರೀಕಂಠೇಶ್ವರನ ಪರಮಭಕ್ತ. ಹಾಗಾಗಿ ಸಮಯ ಸಿಕ್ಕಾಗಲಿಲ್ಲ ಸ್ವಾಮಿಯ ದರ್ಶನಕ್ಕೆ ಬರುತ್ತಿರುತ್ತೇನೆ ಎಂದರು.
ರಾಜ್ಯದಲ್ಲಿ ರಾಜಕೀಯವಾಗಿ ಅನೇಕ ಬೆಳವಣಿಗಳು ನಡೆಯುತ್ತಿರುತ್ತವೆ. ರಾಜಕೀಯ ಅಂದ ಮೇಲೆ ಸಣ್ಣಪುಟ್ಟ ಲೋಪದೋಷ ಜರುಗುತ್ತಿರಬೇಕು ಎಂದ ಅವರು, ವರ್ಷದ ಅಂತ್ಯದಲ್ಲಿ ನಗರಸಭೆಯ ಚುನಾವಣೆ ನಡೆಯಲಿದೆ. ಶಾಸಕರಿಗೆ ಸಿದ್ಧತೆ ಮಾಡಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ. ಮುಂದುವರಿದು ಸಾಲು ಸಾಲು ಚುನಾವಣೆಗಳು ನಡೆಯಲಿವೆ ಎಂದು ತಿಳಿಸಿದರು.
========
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net