

ಧಾರವಾಡದಲ್ಲಿ ನಡೆದ 45ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‌ನ ಕ್ರೀಡಾಪಟುಗಳು 95 ಪದಕಗಳನ್ನು ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ಮೈಸೂರು ತಂಡದಿಂದ ಸುಮಾರು 41 ಕ್ರೀಡಾಪಟುಗಳು ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ 26 ಮಂದಿ 20 ಚಿನ್ನ, 18 ಬೆಳ್ಳಿ ಹಾಗೂ 19 ಕಂಚು ಸೇರಿದಂತೆ 57 ಪದಕಗಳನ್ನು ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ 18 ಚಿನ್ನ, 9 ಬೆಳ್ಳಿ ಹಾಗೂ 11 ಕಂಚು ಸೇರಿದಂತೆ 38 ಪದಕಗಳನ್ನು ಗೆದ್ದಿದ್ದಾರೆ. ಒಟ್ಟಾರೆ 95 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
35 ವರ್ಷದಿಂದ 85 ವರ್ಷ ಮೇಲ್ಪಟ್ಟ ವಯೋಮಾನದ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಪುರುಷರ ವಿಭಾಗದಲ್ಲಿ ಜ್ಞಾನೇಶ್ವರ್, ರಕ್ಷಿತ್, ಖೇತಾರಾಮ್, ಪರಶುರಾಮ್ ಕಾಂಬ್ಳೆ, ನಿತ್ಯಾನಂದ, ಡಾ.ಕೆ.ಎಸ್.ರಘುನಂದನ್, ಡಾ.ಪ್ರವೀಣ್ ಕುಮಾರ್, ಡಾ.ರಾಜಗೋಪಾಲ್, ಎನ್.ಮಂಜು, ಅಶೋಕ್ ಕುಮಾರ್, ಅಮರನಾಥ್, ಪೆಮ್ಮಯ್ಯ, ಎಸ್.ಬಸವರಾಜು, ಶಶಿಧರ್ ಕುಟ್ಟಿ, ಬಿ.ಕೆ.ಸೋಮಶೇಖರ್, ಸುಬ್ಬಯ್ಯ, ನಿರಂಜನ್ ಕುಮಾರ್, ಕೆ.ಎನ್.ಸೋಮಶೇಖರ್, ಶ್ರೀನಿವಾಸಯ್ಯ, ಬಿ.ಎಸ್.ನರಸಿಂಹ ಪ್ರಸಾದ್, ಎಂ.ಪಿ.ಚಂದ್ರಶೇಖರ್, ಎಸ್.ಮಹದೇವ್, ಮಹದೇವರಾವ್, ಬಲರಾಮೇಗೌಡ, ಚೆಲುವೇಗೌಡ ಹಾಗೂ ಅಪ್ಪಸ್ವಾಮಿ ವಿವಿಧ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಯಶಸ್ವಿನಿ, ಕೆ.ಕೆ.ರಶ್ಮಿ, ಎಸ್.ಎಂ.ಉಮಾ, ಎಂ.ಸುಮನಾ ಬಂಗೇರೆ, ಜಿ.ಪುನೀತಾ, ಎ.ವಿ.ಆಶಾ, ಸಿ.ಆರ್.ಹೇಮಾ, ಎನ್.ಆರ್.ಶೋಭಾ, ಎಂ.ಎಸ್.ಸರೋಜಾ, ಎಚ್.ಎಂ.ಸುಜಾತಾ, ಬಿ.ಸಿ.ಪಾರ್ವತಿ, ಟಿ.ಎಸ್.ಸುಬ್ಬಲಕ್ಷ್ಮೀ, ಬಿ.ಮಂಜಮ್ಮ, ಎಚ್.ಎಂ.ಭಾರತಿ ಹಾಗೂ ಎಸ್.ಪಾರ್ವತಿ ಕಾಂತರಾಜು ಪದಕಗಳನ್ನು ಗಳಿಸಿದ್ದಾರೆ ಎಂದು ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷೆ ಸುಮನ ನರಸಿಂಹಮೂರ್ತಿ, ಕಾರ್ಯದರ್ಶಿ ಬಿ. ಬಸವರಾಜು ಹಾಗೂ ಉಪಾಧ್ಯಕ್ಷ ಎಂ.ಯೋಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.